18 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ. ಕೀರ್ತನೆಗಳು 34:7
ಈ ಭರವಸೆಯು ಕ್ರೈಸ್ತನಾದವನಲ್ಲಿ ಹೊಸ ವಿಶ್ವಾಸವನ್ನು ಹುಟ್ಟಿಸಿ ಅವನನ್ನು ಧೈರ್ಯಗೊಳಿಸುತ್ತದೆ. ಭೂಲೋಕದ ಯಾವುದೇ ಶಕ್ತಿಯು ಇವನಿಗೆ ವಿರುದ್ಧವಾಗಿದ್ದರೂ, ಅವನು ತನ್ನಲ್ಲಿರುವ ಬಲದಿಂದ ಎದುರಿಸಲು ಸಾಧ್ಯವಿರುವುದಿಲ್ಲ. ಆತನಿಗೆ ಬರುವ ವಿಪತ್ತುಗಳೂ ಮತ್ತು ಅಪಾದಿತ ದೂತನಿಂದಲೂ, ಜೊತೆಗೆ ಮುನುಷ್ಯನಿಂದ ಬರುವ ವಿರೋಧಗಳೂ ಹಾಗೂ ಅವನು ದುರಾತ್ಮ ಸೇನೆಗಳ ಮೇಲೆ ಹೋರಾಡುವಾಗ ಸೈತಾನನೂ ಹಾಗೂ ಅವನ ಅನುಯಾಯಿಗಳಾದ ದುರಾತ್ಮಗಳ ವಿರುದ್ಧ ಹೋರಾಡುವಾಗ ಅವನು ಹೇಳುವದೇನೆಂದರೆ - “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” “ನಮಗೆ ವಿರೋಧವಾಗಿ ಬರುವ ಎಲ್ಲರಿಗಿಂತ ಹೆಚ್ಚಿನವನು ನಮ್ಮ ಕಡೆ ಇದ್ದಾನೆ”. ಹೀಗಿರುವಲ್ಲಿ ಪರಲೋಕದ ಎಲ್ಲಾ ಸೈನ್ಯವು ದೇವರ ಚಿತ್ತಕ್ಕೆ ಒಳಗಾಗಿದೆ. ಇವರನ್ನು ದೇವರು ತನ್ನ ಜ್ಞಾನಾನುಸಾರ ತನ್ನ ಕಾರ್ಯ ನಿರ್ವಹಿಸಲು ಉಪಯೋಗಿಸುತ್ತಾನೆ-Z ’97, 120 (R2139). R2140

