6 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಆದುದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳವದೇನಂದರೆ - ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ, ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು. ರೋಮಾಪುರದವರಿಗೆ 12:1
ನಮ್ಮ ಎಲ್ಲವನ್ನು ಕರ್ತನಿಗೆ ಸೇವೆಯ ಮುಖಾಂತರ ಅರ್ಪಿಸುವದು ವಿವೇಕಪೂರ್ವಕವಾದದು. ಆದರೆ, ಈ ಸಮರ್ಪಣೆ ಬಹಳ ಕಡಿಮೆಯಾದದ್ದು, ಕರ್ತನು ನಮಗೆ ತೋರಿಸಿರುವ ಅನುಕಂಪ, ಸಹಾನುಭೂತಿ ಮತ್ತು ಅಪಾರವಾದ ಕೃಪೆಗೆ ಹೋಲಿಸಿದರೆ, ನಾವು ಸಮರ್ಪಿಸುವದು ಬಹಳ ಅಲ್ಪವಾದದ್ದಾಗಿರುತ್ತದೆ. ನಮ್ಮ ಪ್ರತಿಷ್ಠೆಯುಳ್ಳ ಸೇವೆಗೆ ಯಾವ ಬಹುಮಾನವೂ ಇಲ್ಲದೆ ಹೋದರೂ ಅದರ ಬಗ್ಗೆ ಚಿಂತಿಸಬಾರದು. ಆದರೆ, ದೇವರು ನಂಬಿಗಸ್ತನು. ಆತನು ಈ ಸೇವೆಗೆ ದೊಡ್ಡ ದೊಡ್ಡ ಆಶೀರ್ವಾದಗಳನ್ನು ಹಾಗೂ ಬಹುಮಾನಗಳನ್ನು ಇಟ್ಟಿದ್ದಾನೆ. ಇವುಗಳನ್ನು ನಾವು ನಿರಾಕರಿಸಿದರೆ ದೇವರ ಕರುಣೆ ಮತ್ತು ಕಾಳಜಿಯನ್ನು ಮೆಚ್ಚುವವರಾಗಿರುವದಿಲ್ಲ. ಇದು ನಮ್ಮ ಮನಸ್ಸಿನ ದೌರ್ಬಲ್ಯ ಹಾಗೂ ನಮ್ಮ ಅಪರಿಪೂರ್ಣ ತೀರ್ಮಾನವನ್ನು ಸೂಚಿಸುತ್ತದೆ. ಇದರಿಂದ ಈ ಲೋಕದ ನಶಿಸಿಹೋಗುವ, ಗಣನೆಗೆ ಬಾರದ ಮತ್ತು ಸ್ವಾರ್ಥತೆಯಿಂದ ಕೂಡಿರುವ ಸಂತೋಷವು ಕೆಲವು ವರ್ಷಗಳು ಸಿಗಬಹುದು. ಆದರೆ, ದೇವರು ಅನುಗ್ರಹಿಸುವ ನಿರಂತರ ಶಾಂತಿ, ಸಮಾಧಾನ, ಸಂತೋಷ ಇವುಗಳನ್ನು ಆತನೊಂದಿಗೆ ಹೊಂದಾಣಿಕೆಯಾಗಿರುವ ಎಲ್ಲಾ ಭಕ್ತರಿಗೆ ಕೊಡುವಾಗ ಈ ಲೋಕದ ಆಶೆಗಳು ಏನೂ ಇಲ್ಲದಂತೆ ಕಾಣಿಸುವದು-Z ’00, 170 R2642

