17 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು. ಕೀರ್ತನೆಗಳು 91:11
ದೇವರು ನಂಬಿಗಸ್ತರಾದ ಕೆಲವು ಕ್ರೈಸ್ತ ಧರ್ಮಾಧಿಕಾರಿಗಳನ್ನು ಮತ್ತು ಕೆಲವು ಬೋಧಕರನ್ನು ನಿಮ್ಮ ಆತ್ಮಗಳನ್ನು ಕಾಯಲು ಎಬ್ಬಿಸುವನು, ಇವರು ದೇವರಿಗೆ ಲೆಕ್ಕ ಒಪ್ಪಿಸಬೇಕಾಗುವದು. “ನಿಮ್ಮ ಮಧ್ಯದಲ್ಲಿ ಸುಳ್ಳು ಬೋಧಕರೂ ಕೂಡಾ ಎದ್ದು ದೇವರ ವಾಕ್ಯವನ್ನು ಕೆಡಿಸಿ, ವಂಚಿಸುವ ಕಥೆಗಳನ್ನು ಕಟ್ಟಿ ಆತ್ಮಗಳನ್ನು ತಪ್ಪು ದಾರಿಗೆ ಎಳಿಯುತ್ತಾರೆನ್ನುವದು ನಿಜ. ಆದರೂ ದೇವರ ಮಕ್ಕಳು ದೇವರ ವಿಷಯದಲ್ಲಿ ನಮ್ರತೆಯಿಂದಲೂ, ಸರಳತೆಯಿಂದಲೂ ನಡೆದು ನಂಬಿಕೆಯನ್ನು ಬಿಟ್ಟು ಹೋಗದೆ, “ಕರ್ತನು ಹೀಗೆ ನುಡಿದಿದ್ದಾನೆ” ಎಂಬುದಾಗಿ ಹೇಳುವರು. ಅಲ್ಲದೆ, ಅವರು ಪ್ರತಿಯೊಂದು ವಿಷಯದಲ್ಲಿ ತಾವು ಇಟ್ಟಿರುವ ನಂಬಿಕೆಯಲ್ಲಿ ದೃಢವಾಗಿದ್ದು, ಪ್ರತಿಯೊಂದು ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಯಾವದು ಸರಿ, ಯಾವದು ತಪ್ಪು ಎಂಬದನ್ನು ದೇವರ ವಾಕ್ಯದ ಆಧಾರದ ಮೇಲೆ ರುಜುಪಡಿಸಿ, ಸತ್ಯವನ್ನು ಅವಲಂಬಿಸುವರು. ಅಪೋಸ್ತಲನಾದ ಪೌಲನು (ಇಬ್ರಿಯ 13:17) “ಅವರು ನಿಮ್ಮ ಆತ್ಮಗಳನ್ನು ಕಾಯುವರು ಮತ್ತು ಅವರ ಮಾತಿನಲ್ಲಿ ನಿಮಗೆ ಭರವಸೆ ಇರಲಿ ಎಂಬದಾಗಿ ಸಲಹೆ ಮಾಡಿದ್ದಾನೆ. ನಮ್ಮ ಕರ್ತನು ಕುರುಬನಾಗಿ ತನ್ನ ಹಿಂಡನ್ನು ಕಾಯುವನು-Z ’04, 75 (R3331). R3332

