2 ಜುಲೈರ ದೈನಂದಿನ ಭಕ್ತಿಚಿಂತನೆ
ಬೈಸಿಕೊಂಡು ಹರಸುತ್ತೇವೆ, ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ. ೧ ಕೊರಿಂಥದವರಿಗೆ 4:12
ನೀನು ಒಬ್ಬ ನಂಬಿಗಸ್ತ ವಿದ್ಯಾರ್ಥಿ(ಕ್ರಿಸ್ತನ ಪಾಠಶಾಲೆಯಲ್ಲಿ)ಯಾಗಿದ್ದರೆ, ನೀನು ಬಹುಬೇಗ ಕ್ರಿಸ್ತನ ನಿಯಮ ಅಂದರೆ ಪರಿಪೂರ್ಣ ಸ್ವಾತಂತ್ರ್ಯವನ್ನು ಅರಿತು, ನಿನ್ನ ಯೋಚನೆ, ನಿನ್ನ ಹೃದಯದ ಉದ್ದೇಶವು ಪಾಪಿಯನ್ನು ಹಗೆ ಮಾಡದೆ ಎಲ್ಲಾ ತರವಾದ ಪಾಪವನ್ನು ಹಗೆ ಮಾಡುವವನಾಗುವಾಗಿ ನಿನ್ನ ಹೃದಯದಲ್ಲಿ ದೇವರ ಪ್ರೀತಿಯು ಸಿದ್ಧಿಗೆ ಬರುವದು. ನಮ್ಮನ್ನು ನಿಂದಿಸುವವರ ಮತ್ತು ಕೇಡುಮಾಡುವವರ ಬಗ್ಗೆ ನಮ್ಮ ಭಾವನೆಯು ಕಹಿಯಾಗಿ ಕಂಡುಬಂದರೂ ಅದರ ವಿರುದ್ಧ ಹೋರಾಡಿ ಅದರ ಮೇಲೆ ಜಯ ಸಾಧಿಸಿ ನಮ್ಮ ಎಲ್ಲಾ ನರನಾಡಿಗಳಲ್ಲಿ ನಮ್ಮ ಆತ್ಮದಲ್ಲಿ ನಮ್ಮ ಮಹಾ ಬೋಧಕನ ಶಿಕ್ಷಣಪೂರಿತವಾದ ಆಜ್ಞೆ “ನಿಮ್ಮ ವ್ಯೆರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರಲ್ಲಿ ಪ್ರಾರ್ಥಿಸಿರಿ” ಎಂಬುದನ್ನು ನೆರವೇರಿಸಿದಂತಾಗುವುದು.-Z ’99, 5 (R2411). R2412

