31 ಜುಲೈರ ದೈನಂದಿನ ಭಕ್ತಿಚಿಂತನೆ
ಅವನವನ ಕೆಲಸವು ವ್ಯಕ್ತವಾಗುವುದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು. ೧ ಕೊರಿಂಥದವರಿಗೆ 3:13
ಕ್ರಿಸ್ತನು ಬರುವ ಈ ಕಾಲವನ್ನು ಕುರಿತು ಅಪೋಸ್ತಲನು ಹೇಳುವದೇನಂದರೆ ಇದು ಬೆಂಕಿಯಿಂದ ಶೋಧಿಸಲ್ಪಟ್ಟು ಪರೀಕ್ಷಿಸುವ ಕಾಲ ಎಂಬದಾಗಿ ಹೇಳಿದ್ದಾನೆ. ಇದನ್ನು ಒಬ್ಬ ಉತ್ಸಾಹಭರಿತ ನಂಬಿಕೆಯಿಂದ ಕೂಡಿರುವ ಕ್ರೈಸ್ತನು ಮನೆಯನ್ನು ಚಿನ್ನ ಬೆಳ್ಳಿ ಮುತ್ತು ರತ್ನಗಳಿಂದ ಕಟ್ಟುವನು ಮತ್ತು ಯುಗಾಂತ್ಯದಲ್ಲಿ ಸಂಭವಿಸುವ ಪರೀಕ್ಷೆಯ ಬೆಂಕಿಯಿಂದ ಕೂಡಿರುವ ಪರೀಕ್ಷೆ ಈ ಬೆಂಕಿಯು ನಿಜವಾದ ಗುಣವನ್ನು ಹೊಂದಿರುವವನನ್ನು ಬಿಟ್ಟು ಬೇರೆ ಎಲ್ಲವನ್ನು ದಹಿಸಿ ಬಿಡುವುದು ಎಂಬದಾಗಿ ಹೇಳಿದ್ದಾನೆ. ಈ ಪ್ರಾಮಾಣಿಕ ನೈಜ ಗುಣ ಒಂದು ಕ್ಷಣದಲ್ಲಾಗಲಿ, ಒಂದು ದಿನದಲ್ಲಾಗಲಿ ಅಥವ ಆಕಸ್ಮಿಕವಾಗಿ ಬೆಳೆಯುವಂಥದಲ್ಲ ಇದು ನಿಧಾನವಾಗಿ, ದಿನೇ ದಿನೇ ಅಭಿವೃದ್ದಿಯಾಗುತ್ತಾ ಚೆನ್ನಾಗಿ ಒರೆಹಚ್ಚಲ್ಪಟ್ಟು ಬಲಗೊಂಡು ಆಲೀವ್ ಮರದಂತೆ ದೃಢವಾಗಿ ನಿಲ್ಲುವಂತ ನೈಜ ಗುಣವಾಗಿರುವುದು.-Z ’99, 171 (R2494). R2496

