11 ಜುಲೈರ ದೈನಂದಿನ ಭಕ್ತಿಚಿಂತನೆ
ದೇವರಿಂದ ಹುಟ್ಟಿರುವವನು ಪಾಪ ಮಾಡುವವನಲ್ಲವೆಂಬುದು ನಮಗೆ ಗೊತ್ತದೆ; ದೇವರಿಂದ ಹುಟ್ಟಿದಾತನು ಅವನನ್ನು ಕಾಪಾಡುವನು; ಕೆಡುಕನು ಅವನನ್ನು ಹಿಡಿಯುವುದಿಲ್ಲ. ೧ ಯೋಹಾನನು 5:18
ಎಲ್ಲಿಯವರೆಗೆ ಹೃದಯ (ಮನಸ್ಸು, ಚಿತ್ತ) ಶುದ್ಧವಾಗಿದ್ದು, ನೀತಿ ಮತ್ತು ದೇವರೊಂದಿಗೆ ಹೊಂದಾಣಿಕೆಯಾಗಿರುವುದೋ ಅಂದರೆ ಶುದ್ಧತ್ವ ಮುಂದುವರೆಯುವುದೋ, ಅಲ್ಲಿಯವರೆಗೆ ನೂತನ ಮನಸ್ಸು ಪಾಪವನ್ನು ಒಪ್ಪವುದಿಲ್ಲ ಮತ್ತು ಪಾಪವನ್ನು ವಿರೋಧಿಸುತ್ತದೆ. ನಮ್ಮ ಅಂಗಾಗಳಲ್ಲಿರುವ ಸ್ವಾಭಾವಿಕವಾದ ಬಲಹೀನತೆ, ಆಶೆ ಆಕಾಂಕ್ಷೆಗಳ ವಿರುದ್ಧ ಸತತ ಹೋರಾಟ ನಮ್ಮಲ್ಲಿ ನಡೆಯುತ್ತಿದ್ದರೂ, ನಾವು ಈ ಶಾರೀರಿಕ ಅಂಶಗಳಿಂದ ಪ್ರತ್ಯೇಕವಾಗಿರುವವರಾಗಿದ್ದೇವೆ. ನಮ್ಮ ಬಲಹೀನತೆ, ಅಪರಿಪೂರ್ಣತೆಯು ಯೇಸು ಕ್ರಿಸ್ತನಲ್ಲಿ ಹೊಂದಿರುವ ನೂತನ ಮನಸ್ಸಿಗೆ ಅನ್ವಯಿಸದೇ, ಇವುಗಳು ಕ್ರಿಸ್ತನು ಸಮರ್ಪಿಸಿದ ವಿಮೋಚನೆಯ ಯಜ್ಞದ ಫಲವನ್ನು ನಮಗೆ ಅನ್ವಯಿಸುವಾಗ ಮುಚ್ಚಲ್ಪಟ್ಟಿವೆ ಎಂದು ಪರಿಗಣಿಸಲ್ಪಡುವುದು.-Z ’99, 58 (R2438). R2440

