14 ಜುಲೈರ ದೈನಂದಿನ ಭಕ್ತಿಚಿಂತನೆ
ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. ಎಫೆಸದವರಿಗೆ 4:31
ದೈವೀಕ ಧರ್ಮ ಶಾಸ್ತ್ರವನ್ನು ಅತ್ಯುನ್ನತ ಸ್ಥಾನದಲ್ಲಿರಿಸಿ ಅದನ್ನು ಮೆಚ್ಚಿ ಅಭಿವೃದ್ಧಿಯಾಗಿರುವ ಕ್ರೈಸ್ತರು, ಕರ್ತನು ನೋಡುವ ದೃಷ್ಟಿಯಲ್ಲಿ ನೋಡುವದಾದರೆ, ದ್ವೇಷಿಸುವುದು ಕೊಲೆಗೆ ಸಮನಾಗಿಯೂ, ದೂಷಿಸುವುದು ತಲೆತೆಗೆಯುವದಕ್ಕೆ ಸಮಾನವಾಗಿಯೂ ನೆರೆಯವನು ಪಡೆದಿರುವ ಒಳ್ಳೆಯ ಹೆಸರನ್ನು ನಾಶಪಡಿಸುವುದು ಕಳ್ಳತನ ಮತ್ತು ಅತ್ಯಾಚಾರಕ್ಕೂ ಸಮವಾಗಿದೆ. ಈ ಯಾವುದಾದರೂ ಒಂದು ತತ್ವವನ್ನು ಸಭೆಯಲ್ಲಿ ಅಂದರೆ ದೇವಜನರ ಮಧ್ಯದಲ್ಲಿ ಮಾಡುವದಾದರೆ ಅದು ಎರಡರಷ್ಟು ಕೆಟ್ಟದಾಗಿರುವುದು. ಸಹೋದರನ ಹೆಸರನ್ನು ನಾಶ ಪಡಿಸುವುದು ದರೋಡೆಗೆ ಸಮನಾಗಿರುವುದು. ಇಲ್ಲಿ ಒಂದೇ ಒಂದು ವಿನಾಯಿತಿ ಇದೆ. ಅದಾವುದೆಂದರೆ, “ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬಾರದು” ಒಂದು ವೇಳೆ ಒಬ್ಬ ಸಹೋದರನು ಕೆಟ್ಟದಾಗಿ ವರ್ತಿಸುವುದನ್ನು ಗಮನಿಸಿ ಅದನ್ನು ಬೆಳಕಿಗೆ ತರಲು ಮನಸಿಲ್ಲದೆ ಇದ್ದರೂ, ಅನಿವಾರ್ಯವಾಗಿ ತಿಳಿಸಲೇಬೇಕಾಗುವುದು. ಯಾಕಂದರೆ, ನಾವು ಸಹೋದರರನ್ನು ಪ್ರೀತಿಸುತ್ತೇವೆ. ತಿಳಿಸದೆ ಬಿಟ್ಟರೆ ಅದರಿಂದ ಅವರಿಗೆ ಹಾನಿಯಾಗುವುದು. - Z ’99, 71 (R2442). R2445

