26 ಜುಲೈರ ದೈನಂದಿನ ಭಕ್ತಿಚಿಂತನೆ
ಯಾವನು ಜಯಹೊಂದುತ್ತಾನೋ ಅವನಿಗೆ . . . . . . ಬಿಳೀ ಕಲ್ಲನ್ನೂ, ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನೂ ಕೊಡುವೆನು; ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಇನ್ನಾರಿಗೂ ತಿಳಿಯದು.” ಪ್ರಕಟನೆ 2:17
ಜಯಶಾಲಿಗಳಾಗುವವರು ಎಲ್ಲವನ್ನು ಕರ್ತನಿಗಾಗಿ ತ್ಯಾಗ ಮಾಡಿ ಕರ್ತನ ಸಂಪರ್ಕ ಮತ್ತು ಆತನ ಮೆಚ್ಚುಗೆಗೆ ಪಾತ್ರರಾಗಿರುವದನ್ನು ದೃಢಪಡಿಸಬೇಕು, ಮತ್ತು ಬೇರೆ ಎಲ್ಲವನ್ನು ತ್ಯಾಗಮಾಡಿ ಕರ್ತನ ಪ್ರೀತಿ ಆತನ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಬೇಕು. ಈ ಪರೀಕ್ಷೆ ಪ್ರತಿನಿತ್ಯ ಕರ್ತನಿಗಾಗಿ ಪ್ರತಿಷ್ಠಿಸಿಕೊಂಡವರ ಹತ್ತಿರ ಬರುವುದು. ಪ್ರತಿಯೊಬ್ಬ ನಂಬಿಗಸ್ತನು ಪರೀಕ್ಷೆಗಳಲ್ಲಿ ಇದೂ ಒಂದು ಎಂಬುದನ್ನು ತಿಳಿದು ತನ್ನ ಆಕಾಂಕ್ಷೆಯನ್ನು ಆತ್ಮೀಯ ಪರಲೋಕದ ವಸ್ತುಗಳ ಮೇಲಿಟ್ಟು, ಲೌಕಿಕ ಆಶೆಗಳು, ಜೀವಿಗಳು ಮತ್ತು ವಸ್ತುಗಳ ಮೇಲಿಟ್ಟಿರುವ ಆಕಾಂಕ್ಷೆಯನ್ನು ಸಾಯಿಸಿ ಕರ್ತನ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಮತ್ತು ಸೇವೆಯ ಸ್ಪರ್ಧೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.-Z ’99, 140 (R2479). R2480

