9 ಜುಲೈರ ದೈನಂದಿನ ಭಕ್ತಿಚಿಂತನೆ
ಅವನು ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಹೊರಗೆ ಬಿಡುತ್ತಾನೆ. ಸ್ವಂತ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ; ಕುರಿಗಳು ಅವನ ಸ್ವರವನ್ನು ತಿಳುಕೊಂಡು ಅವನ ಹಿಂದೆ ಹೋಗುತ್ತವೆ. ಯೋಹಾನನು 10:4
ಒಳ್ಳೇ ಕುರುಬನ ಧ್ವನಿಯು ನಾನಾ ರೀತಿ ತರದಲ್ಲಿರುವ ಶಬ್ದಗಳನ್ನು ಸಮಂಜಸವಾಗಿ ಒಟ್ಟಿಗೆ ಸೇರಿಸಿ ಮಾಡುವ ಅರ್ಥಪೂರಿತ ಧ್ವನಿಯಾಗಿದ್ದು, ಬೇರೆಯವರ ಧ್ವನಿ ಈ ರೀತಿಯಲ್ಲಿರುವುದಿಲ್ಲ. ಈ ಧ್ವನಿ ನ್ಯಾಯ ಮತ್ತು ಪ್ರೀತಿಯನ್ನೊಳಗೊಂಡ ಸ್ವರಮೇಳದ ಸಮ್ಮಿಲನ ಹಾಗೂ ಜ್ಞಾನ ಮತ್ತು ಶಕ್ತಿಯಿಂದ ಕೂಡಿ ಹೊರಬರುವ ಕರ್ಣಾನಂದಕರ ಸ್ವರ ಮೇಳವಾಗಿರುವುದು. ಜನರ ಮತ್ತು ಸೈತಾನ ಸಿದ್ಧಾಂತಗಳು, ಯೋಚನೆಗಳು, ರಚನೆಗಳು, ಮಹಾಪಾಲಕನಾದ ದೇವರು ತನ್ನ ಮಗನ ಮೂಲಕ ನಮಗೆ ತಲುಪಿಸಿರುವ ಈ ಸ್ವರ, ಧ್ವನಿ ಸಮ್ಮೇಳನಕ್ಕೆ ಹೊಂದಾಣಿಕೆಯಾಗಿರುವುದಿಲ್ಲ. ಇದಲ್ಲದೆ ನಿಜವಾದ ಕುರಿಗಳು ಒಳ್ಳೇ ಕುರುಬನ ಧ್ವನಿಯನ್ನು ಕೇಳಿ ತೃಪ್ತಿಗೊಳ್ಳುತ್ತವೆ. ಬೇರೆ ಯಾವ ಧ್ವನಿಯು ಇಂತಹ ತೃಪ್ತಿಯನ್ನು ಕೊಡುವುದಿಲ್ಲ. ಇವರು ಬೇರೆ ಯಾವ ಸಿದ್ಧಾಂತಗಳು, ತತ್ವಗಳು, ಯೋಚನೆಗಳಿಗೆ ಆಕರ್ಷಕರಾಗುವ ಅಪಾಯವಿರುವುದಿಲ್ಲ, ಬದಲು ಅವರು “ಯೇಸು ಕ್ರಿಸ್ತನು ನನ್ನವನು, ಆತನೇ ನಮ್ಮನ್ನು ತೃಪ್ತಿಪಡಿಸಿರುವನು.” ಎಂದು ಉತ್ತರ ಕೊಡುವರು.-Z ’00, 230 R2672

