21 ಜುಲೈರ ದೈನಂದಿನ ಭಕ್ತಿಚಿಂತನೆ
ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಯೋಹಾನನು 18:37
ನಮ್ಮ ಕರ್ತನು ಸತ್ಯದ ವಿಷಯದಲ್ಲಿ ನಂಬಿಗಸ್ತನಾಗಿದ್ದುದರ ಪರಿಣಾಮವಾಗಿ ಸೈತಾನನಿಂದ ಕುರುಡಾಗಿರುವವರ ವಿರೋಧ ಆತನ ಮೇಲೆ ಎರಗಿ ಬಂದವು. ಆತನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಟ್ಟದ್ದರಿಂದ ಆತನ ಜೀವವನ್ನೇ ತೆಗೆದುಕೊಂಡಿತು. ಸತ್ಯದ ವಿಷಯಕ್ಕೆ ತನ್ನ ಪ್ರಾಣವನ್ನೇ ಕೊಟ್ಟು ಹೋರಾಡಿದನು. ಅದೇ ನಮ್ಮ ವಿಮೋಚನೆಯ ಬೆಲೆಯಾಯಿತು. ಅದೇ ರೀತಿಯಲ್ಲಿ ಕರ್ತನ ಶಿಷ್ಯರೆಲ್ಲರೂ ಸತ್ಯದ ವಿಷಯದಲ್ಲಿ ಸಾಕ್ಷಿಕೊಡಬೇಕು. ಅಂದರೆ ಸತ್ಯವನ್ನೊಳಗೊಂಡ ದೇವರ ಯೋಜನೆ ಮತ್ತು ಆತನ ಗುಣಲಕ್ಷಣಗಳು ಈ ರೀತಿಯಾಗಿ ಸತ್ಯದ ಪರವಾಗಿ ಸಾಕ್ಷಿಕೊಡುವುದರಿಂದ ಕರ್ತನ ನಿಜ ಅನುಯಾಯಿಗಳು ಕ್ರಿಸ್ತನ ಮೂಲಕ ದೇವರಿಗೆ ಮೀಸಲಾಗಿಯೂ, ಮೆಚ್ಚಿಕೆಯಾಗಿಯೂ ಪರಿಶುದ್ಧವಾಗಿ ಇರುವ ಸಜೀವ ಯಜ್ಞವಾಗುವರು. ದೇವರ ರಾಜ್ಯದಲ್ಲಿ ಜೀವ ನಾಯಕನ ಜೊತೆಯಲ್ಲಿ ಇರಬೇಕೆಂದು ನಿರೀಕ್ಷಿಸುವ ಪ್ರತಿಯೊಬ್ಬನು ಸತ್ಯದ ವಿಷಯದಲ್ಲಿ ಪ್ರಾಮಾಣಿಕವಾಗಿ ಸಾಕ್ಷಿ ಕೊಡಲಿ ಅಂದರೆ ದೇವರ ರಾಜ್ಯದ ವಿಷಯದಲ್ಲಿ ಒಂದು ಶ್ರೇಷ್ಠ ಸಾಕ್ಷಿಯೇ ಅದರ ಭೂನಾದಿ, ಅದರ ಮೇಲೆ ಅತಿಶ್ರೇಷ್ಠ ಮಹಿಮೆಯುಳ್ಳ ಕಟ್ಟಡವಾಗಿ ಪರಿಣಮಿಸಿವುದು.-Z ’99, 123 (R2470). R2471

