12 ಜುಲೈರ ದೈನಂದಿನ ಭಕ್ತಿಚಿಂತನೆ
ಆದದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವುದು. ಯೋಹಾನನು 8:36
ಮಹಾಬೋಧಕನ ಮಾತುಗಳಿಗೆ ಕಿವಿಗೊಡುವ ನಿಜ ಶಿಷ್ಯರು ಎಲ್ಲಾ ವಿಷಯಗಳಲ್ಲಿ ಮುಂದುವರಿದು, ಅಜ್ಞಾನ ಮೂಡನಂಬಿಕೆಗಳಿಂದ ಬಿಡುಗಡೆ ಹೊಂದಿ ಪಾಪವನ್ನು ವಿಸರ್ಜಿಸಿ ತಮ್ಮಲ್ಲಿರುವ ಸ್ವಾಭಾವಿಕ ಬಲಹೀನತೆ, ಕುಂದು ಕೊರತೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ದೈವಿಕ ಮನಸ್ಸನ್ನು ಅಂದರೆ ಸತ್ಯವನ್ನು ಮೆಚ್ಚುವರು. ಈ ಬಿಡುಗಡೆ ಇವರನ್ನು ಗಾಸಿಪಡಿಸದೆ ಆಶೀರ್ವದಿಸುವುದು. ಅಹಂಕಾರ ಮತ್ತು ಉದ್ದಟತನವನ್ನು ತೆಗೆದು ಹಾಕಿ ದೀನಸ್ವಭಾವವನ್ನು ಹುಟ್ಟಿಸುವುದು. ಕೋಪಕ್ಕೆ ಬದಲು ಶಾಂತಿಯನ್ನು ತರುವುದು, ಸ್ವಾರ್ಥತೆ ಮತ್ತು ಮತ್ಸರಕ್ಕೆ ಬದಲು ಉದಾರತ್ವವನ್ನು ಮತ್ತು ದಯೆಯನ್ನು ತರುವದು, ಅತೃಪ್ತಿ ಮತ್ತು ನಿಷ್ಟುರಕ್ಕೆ ಬದಲು ಸಂತೋಷ ಮತ್ತು ಸಮಾಧಾನವನ್ನು ತರುವುದು ನಿಜವಾಗಿಯೂ ದೇವರ ಮಗನು ನಮ್ಮನ್ನು ಬಿಡುಗಡೆ ಮಾಡುವನು.-Z ’99, 57 (R2438). R2440

