21 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು. ಕೀರ್ತನೆಗಳು 23:4
ಕರ್ತನ ನಿಜವಾದ ಮಂದೆಯಲ್ಲಿರುವ ನಿಜವಾದ ಕುರಿಗಳು ಕೇಡಿಗೆ ಹೆದರುವದಿಲ್ಲ. ಏಕೆಂದರೆ, ಕರ್ತನು ಅವರಿಗೆ ಕೃಪೆ ತೋರಿಸುವದಲ್ಲದೆ, ಆತನು ಅವರೊಂದಿಗಿರುವನು. ಅವರ ಪರವಾಗಿದ್ದು, ಅವರಿಗೆ ತಾನು ನಿರ್ಮಿಸಿದ ಪಾಪ ಪರಿಹಾರದ ವಿಮೋಚನೆಯ ಫಲವನ್ನು ಅವರ ಪರವಾಗಿ ಅನ್ವಯಿಸಿರುವನು. ಆತನು ತನ್ನ ವಾಕ್ಯದಲ್ಲಿ ಮಾಡಿರುವ ವಾಗ್ದಾನದ ಮೂಲಕ ಅವರೊಂದಿಗಿರುವದು ಮಾತ್ರವಲ್ಲದೆ, ಆಶ್ವಾಸನೆಯೊಂದಿಗೆ ಅವರೊಟ್ಟಿಗಿರುವನು. ಆತನ ಅಭಯದ ಮೂಲಕ ಮರಣವು ಅವರ ಜೀವವನ್ನು ಕೊನೆಗಾಣಿಸುವದಿಲ್ಲವಾದರೂ, ಅವರು ಪುನರುತ್ಥಾನದಲ್ಲಿ ಎದ್ದು ಬರುವವರೆಗೂ ಕ್ರಿಸ್ತನಲ್ಲಿ ನಿದ್ರೆ ಹೋಗುವರು. ಇಂತಹ ಆಶ್ವಾಸನೆ ನಮಗಿರುವಾಗ ನಾವು ಕಾರ್ಗತ್ತಲಿನ ಕಣಿವೆಯಲ್ಲಿ ಹಾಡುತ್ತಾ, ಕರ್ತನನ್ನು ಕೊಂಡಾಡುತ್ತಾ ನಡೆಯುವಾಗ ಯಾವ ಕೇಡಿಗೂ ಹೆದರುವ ಕಾರಣವಿರುವದಿಲ್ಲ. ನಮ್ಮ ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ಆತನನ್ನು ಕೊಂಡಾಡುತ್ತಾ ಆತನ ಪವಿತ್ರ ನಾಮಕ್ಕೆ ಘನವನ್ನು ಸಲ್ಲಿಸುವವರಾಗಿರಬೇಡವೇ? ಕರ್ತನು ನಮ್ಮನ್ನು ಪ್ರೀತಿಸಿ, ತನ್ನ ರಕ್ತವನ್ನು ಸುರಿಸಿ ನಮ್ಮನ್ನು ಕೊಂಡುಕೊಂಡಿದ್ದಾನೆ. ಆತನು ವಿಮೋಚಕನಾಗಿ ನಮ್ಮನ್ನು ತನ್ನ ರಾಜ್ಯದಲ್ಲಿ ಬಾಧ್ಯತೆಯನ್ನು ಕೊಡುವದಕ್ಕಾಗಿ ಕರೆದಿರುವನು-Z ’03, 413 (R3268). R3269

