15 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಆದುದರಿಂದ, ಅನ್ಯ ಜನರ ಮಧ್ಯದಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ. ೨ ಕೊರಿಂಥದವರಿಗೆ 6:17
ಯಾರು ತಮ್ಮ ಮನಸ್ಸಾಕ್ಷಿಗೆ ಒಳಪಟ್ಟು ಆತ್ಮೀಕ ವಿಷಯಗಳಲ್ಲಿ ಲೋಕದ ವ್ಯವಹಾರಗಳಿಂದ ಪ್ರತ್ಯೇಕವಾಗಿ ಜೀವಿಸುತ್ತಾರೋ ಮತ್ತು ಹೃದಯದ ಸುನ್ನತಿಯನ್ನು ಒಪ್ಪಿಕೊಂಡು ದೇವರ ಕುಟುಂಬಕ್ಕೆ ಸೇರಿರುವರೋ, ಅಂಥಹÀವರನ್ನು ಮಾತ್ರ ‘ಸಹೋದರರು’ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಇಂಥಹವರನ್ನು ಲೌಕಿಕ ನೀತಿಶಾಸ್ತ್ರಜ್ಞರು, ನಿರಾಶಾವಾದಿಗಳು ಮತ್ತು ಟೀಕಿಸುವವರು ಮಾತ್ರವಲ್ಲದೆ, ಲೋಕದ ಬಹುಪಾಲು ಜನರು ವಿರೋಧಿಸುತ್ತಾರೆ. ಏಕೆOದರೆ ಬೆಳಕು ಮತ್ತು ದೈವಜ್ಞಾನವು ಅವರ ಕತ್ತಲೆಯಂಥ ತತ್ವಗಳನ್ನು ಖಂಡಿಸುತ್ತದೆ. ಹೀಗಿರುವಲ್ಲಿ ನಾವು ಲೋಕದಿಂದ ಪ್ರತ್ಯೇಕವಾಗಿದ್ದು ಅದನ್ನು ಮುಂದುವರಿಸುವದೋಂದೇ ನಮಗಿರುವ ಒಳ್ಳೆಯ ಮಾರ್ಗ. ನಿಜವಾದ ಆತ್ಮೀಕ ಇಸ್ರಾಯೇಲ್ಯರನ್ನು ಸಹೋದರರನ್ನಾಗಿ ಪರಿಗಣಿಸಬೇಕು. ಹಣಜಿಯಿಂದ ಗೋಧಿ ಕಾಳು ನೈಜತ್ವದಲ್ಲಿ ಪ್ರತ್ಯೇಕವಾಗಿ ಒಳ್ಳೆಯ ಕಾಳಾಗಿರುತ್ತದೆ-Z ’99, 203 (R2510). R2512

