5 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಅದು ಯೆಹೋವನ ರೋಷಾಗ್ನಿಯು. ಪರಮ ಗೀತ 8:6
ಪ್ರತಿಯೊಬ್ಬ ಕ್ರೈಸ್ತನು ಎದುರಿಸಬೇಕಾದ ಶತ್ರುಗಳಲ್ಲಿ ಮತ್ಸರವು ಅತಿ ಕ್ರೂರವಾದದ್ದಾಗಿದೆ. ದೇವರಿಗೂ, ಮನುಷ್ಯರಿಗೂ ಮತ್ತು ಎಲ್ಲಾ ಒಳ್ಳೆಯ ಸೂತ್ರಗಳಿಗೆ ಅಡ್ಡಿಯಾಗಿರುವ ಮಾತ್ಸರ್ಯವನ್ನು ತಕ್ಷಣವೇ ಸಂಹರಿಸತಕ್ಕದ್ದಾಗಿದೆ. ಒಂದು ಕ್ಷಣ ನಮ್ಮ ಹೃದಯಗಳಲ್ಲಿ ಮತ್ಸರವು ಪ್ರವೇಶಿಸಿದಲ್ಲಿ, ಆ ಕ್ಷಣದಲ್ಲಿಯೇ ಹೃದಯವನ್ನು ಅಪವಿತ್ರಗೊಳಿಸುವುದು. ಕೂಡಲೇ ದೇವರ ಪರಿಶುದ್ಧಾತ್ಮ ಶಕ್ತಿಯಿಂದಲೂ, ಪ್ರೀತಿಯಿಂದಲೂ ಅದರ ಶುದ್ಧೀಕರಣಕ್ಕೆ ಪ್ರಾರ್ಥಿಸಬೇಕು. ಮತ್ಸರವು ಕ್ರೂರವಾದ ಅಮಾನುಷತ್ವವಲ್ಲದೆ, ಅದರ ವಿಷಪೂರಿತ ಕೋರೆಗಳು ಇತರರಿಗೆ ನೋವು ಮತ್ತು ಹಿಂಸಾಕಷ್ಟಗಳನ್ನು ಕೊಡುವದು. ಮಾತ್ಸರ್ಯಯುಳ್ಳವನಿಗೆ ವಿಪತ್ತು ಬರುವದಲ್ಲದೆ, ಅದರಲ್ಲಿ ಹೆಚ್ಚೆಚ್ಚಾಗಿ ವ್ಯವಹರಿಸುವನನ್ನು ನಾಶನದ ಮಾರ್ಗಕ್ಕೆ ಕೊಂಡೊಯ್ಯುತ್ತದೆ. ಮಾತ್ಸರ್ಯವು ಪಾಪದ ಆಲೋಚನೆ ಮತ್ತು ದುಷ್ಟತ್ವಗಳನ್ನು ಕೂಡಿಸಿ, ಅದನ್ನು ಕ್ರಿಯೆಗಳಲ್ಲಿ ತೊಡಗಿಸುವದು. ಈ ರೀತಿಯಾಗಿ ವಿಷಪೂರಿತವಾದ ಮನಸ್ಸು ಶುದ್ಧವಾಗಿ ನಿವಾರಣೆಯಾಗುವದು ಬಹಳ ಕಷ್ಟವಾಗುತ್ತದಲ್ಲದೆ, ಈ ಮಾತ್ಸರ್ಯವು ತನ್ನ ಸುತ್ತಮುತ್ತಲಿರುವ ಪರಿಸರವನ್ನು ತನ್ನ ಹತೋಟಿಯಲ್ಲಿ ಒಳಪಡಿಸಿಕೊಳ್ಳಲು ತಡವಾಗುವದಿಲ್ಲ-Z ’03, 330 (R3321). R3231

