11 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು, ಅವನು ನನ್ನ ಶಿಷ್ಯನಾಗಿರಲಾರನು. ಲೂಕನು 14:27
ಅನಾನುಕೂಲಕಾಲದಲ್ಲಿಯೂ ತಂದೆಯ ಚಿತ್ತವನ್ನು ನೆರವೇರಿಸುವದು ಶಿಲುಬೆಯನ್ನು ಹೊತ್ತುಕೊಂಡು ಹೋಗುವದಕ್ಕೆ ಅನುಗುಣವಾಗಿದೆ. ಈ ಮಾರ್ಗದಲ್ಲಿ ಕರ್ತನು ನಡೆದಾಗ ಜನರು ಆತನನ್ನು ದ್ವೇಷಿಸಿ ವೈರಿಗಳಾದದ್ದಲ್ಲದೆ, ಹೊಟ್ಟೆಕಿಚ್ಚುಪಟ್ಟು ಆತನನ್ನು ಹಿಂಸೆಗೆ ಒಳಪಡಿಸಿದರು. ಇವರು ತಮ್ಮನ್ನು ತಾವು “ದೇವಜನರೆಂದು ತಿಳಿದಿದ್ದರು, ಆದರೆ ಕರ್ತನು ಅವರ ಹೃದಯಗಳನ್ನು ತಿಳಿದವನಾಗಿದ್ದು, ಅವರನ್ನು ಕುರಿತು, ನಿಮ್ಮ ತಂದೆ ಸೈತಾನನು,” ಎಂಬದಾಗಿ ಹೇಳಿದನು. ಹೀಗಿರುವಲ್ಲಿ ನಾವು ಕರ್ತನು ನಡೆದ ದಾರಿಯಲ್ಲಿ ನಡೆಯುತ್ತಿರುವದರಿಂದ ನಾವು ಹೊರುವ ಶಿಲುಬೆ ಆತನಿಗಾದ ಹಾಗೆಯೇ ನಮಗೂ ಆಗುವದು. ಅದೇನಂದರೆ, ತಂದೆಯ ಚಿತ್ತವನ್ನು ನೆರವೇರಿಸುವದಕ್ಕೆ ವಿರೋಧವಾಗುವದು; ಹಾಗೂ ಆತನಿಗಾಗಿ ಸೇವೆ ಮಾಡುವಾಗ ವಿರೋಧವಾಗುವದು. ಕರ್ತನು ನಮಗೆ ನಿರ್ದೇಶಿಸಿದ ಪ್ರಕಾರ “ನಿಮ್ಮ ಬೆಳಕು ಪ್ರಕಾಶಿಸಲಿ”, ಎಂಬದನ್ನೂ ವಿರೋಧಿಸುವರು-Z ’03, 345 (R3235). R3237

