10 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿ ಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. ಎಫೆಸದವರಿಗೆ 4:29
ಭ್ರಷ್ಠತೆಯಿಂದ ಕೂಡಿರುವ ಅನುಭವಗಳು ಮನಸ್ಸಾಕ್ಷಿಯ ಹಿಂದೆ ಅಂಟಿಕೊಂಡಿರಲು, ಸತ್ಯವನ್ನು ಆಡುವದು ಯಾವಾಗಲೂ ಸರಿಯಾದದ್ದು ಎನ್ನುವದನ್ನು ಒಪ್ಪುವದಿಲ್ಲ; ಮತ್ತು ಇದು ‘ದೇವರ ಮಾತು’ ಎಂದು ಸಹ ಒಪ್ಪುವದಿಲ್ಲ. ಆದರೆ, ಸತ್ಯವನ್ನು ಹೇಳುವದು ಸುಳ್ಳು ನಿಂದನೆ ಎಂದು ದೇವರು ಉದ್ದೇಶಿಸಿಲ್ಲ. ಶಾರೀರಿಕ ಮತ್ತು ಸೈತಾನನಿಂದ ಉದ್ಭವಿಸುವ ಕೆಟ್ಟಮಾತು, ಸುಳ್ಳು ನಿಂದನೆಗಳು ಅಸತ್ಯವಾಗಿವೆÉ. ನಿಂದನೆಯು ಸತ್ಯವೇ ಆಗಿರಲಿ, ಅಸತ್ಯವೇ ಆಗಿರಲಿ ಅದು ನಿಂದನೆಯೆಂದೇ ಎಣೆಸಿಕೊಳ್ಳುತ್ತದೆ. ಈ ನೀತಿಯು ದೇವರ ದೃಷ್ಠಿಯಲ್ಲಿ ಅಲ್ಲದೆ, ನಾಗರೀಕ ಮನುಷ್ಯರ ನೀತಿಯ ದೃಷ್ಠಿಯಲ್ಲಿಯೂ ಸರಿಯಾದದ್ದಾಗಿದೆ. ನಿಂದಿಸುವದು ಮತ್ತೊಬ್ಬನನ್ನು ಹಾನಿ ಮಾಡುವಂಥದ್ದಾಗಿದೆ. ಅದು ನಿಜವಾಗಿರಬಹುದು ಅಥವಾ ಸುಳ್ಳಾಗಿರಬಹುದು. ನಾಗರಿಕ ಮನುಷ್ಯನ ತತ್ವ ದೇವರ ತತ್ವಕ್ಕೆ ಒಪ್ಪುತ್ತದೆ. ಹೀಗೆ ಇತರರಿಗೆ ಹಾನಿ ಮಾಡುವದು ತಪ್ಪು ಎಂಬುದಾಗಿ ತೀರ್ಮಾನಿಸುತ್ತದೆ-Z ’99, 70 (R2442). R2444

