27 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು. ಮತ್ತಾಯನು 4:7
ಕರ್ತನ ಜನರನ್ನು ಶೋಧನೆಗಳು ತೊಂದರೆಗೆ ಒಳಪಡಿಸುತ್ತವೆ. ಕರ್ತನ ಹೆಸರಿನಲ್ಲಿ ಆಶ್ಚರ್ಯಕರವಾದ ಕೃತ್ಯಗಳನ್ನು ಮಾಡುವಂತೆ ಸಲಹೆಗಳನ್ನು ಕೊಡುತ್ತವೆ ಮತ್ತು ತಾವು ಪರಲೋಕದ ಆತ್ಮೀಯರು ಎಂಬುದನ್ನು ತಮಗೂ ಮತ್ತು ಇತರರಿಗೂ ರುಜುಪಡಿಸುವಂತೆ ಈ ಶೋಧನೆಗಳು ಮರುಳುಮಾಡುತ್ತವೆ. ತಂದೆಯು ನಾವು ಕಲಿಯಬೇಕಾದದ್ದನ್ನು ತಿಳಿಸಿದ್ದಾನೆ. ಇಲ್ಲಿ ನಾವು ಕಲಿಯುವ ಪಾಠವೇನೆಂದರೆ, ಆತನು ನಮಗೆ ನೇಮಿಸಿರುವ ಕೆಲಸವು, ನಾವು ಲೋಕವನ್ನು ಒಪ್ಪಿಸುವದಕ್ಕಾಗಲಿ ಅಥವಾ ದೇವರು ನಮಗೆ ಒಲವು ತೋರಿಸುತ್ತಿರುವನು ಎಂದಾಗಲಿ ಅಥವಾ ಆತನಲ್ಲಿ ನಾವು ಎಷ್ಟು ಮಹತ್ವವುಳ್ಳವರು ಎಂಬುದಾಗಲಿ ಅಲ್ಲ. ನಾವು ದೀನತೆಯಿಂದ, ಸೌಮ್ಯತೆಯಿಂದ, ಸಕಾರಣವಾಗಿ ಮತ್ತು ಸಮಯ ಸಂದರ್ಭಗಳು ಅನುಕೂಲವಿದ್ದಾಗ ದೇವರು ನಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಗುಣಾತಿಶಯಗಳನ್ನು ನಮಗೆ ಪ್ರಕಟಿಸಿರುವದನ್ನು ಇತರರ ಮುಂದೆ ಈ ಬೆಳಕು ಪ್ರಕಾಶಿಸುವಂತೆ ಮಾಡಬೇಕು. ಅಧ್ಬುತವಾದ ಕೆಲಸಗಾರರಾಗಬೇಕೆಂಬ ಅಪೇಕ್ಷೆಯಿಂದ ನಾವು ಸತ್ಯದ ಸೇವಕರಾಗಿ ಸಾಧಾರಣ ಸೇವಕ ಸ್ಥಾನದಲ್ಲಿದ್ದು ಅದನ್ನು ಪ್ರಕಟಿಸುವವರಾಗಬೇಕು-Z ’04, 9 (R3296). R3298

