17 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
. . . . . . ಕ್ರಿಸ್ತನು ನಿಮ್ಮಲ್ಲಿದ್ದು ಪ್ರಭಾವದ ನಿರೀಕ್ಷೆಗೆ ಆಧಾರಭೂತನಾಗಿರುವದೇ. ಕೊಲೊಸ್ಸೆಯವರಿಗೆ 1:27
ದೇವರ ಸತ್ಯ ಮಕ್ಕಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದಂಥÀ ವೈಯಕ್ತಿಕ ಗುಣವನ್ನು ಪಡೆದಿರಬೇಕು. ಈ ಗುಣವು ಬೇರೆ ಕ್ರೈಸ್ತರ ಆತ್ಮಿಕ ಜೀವಿತವನ್ನು ಅವಲಂಬಿಸಿರಬಾರದು. ಇಂಥಹ ಮಗನು ದೇವರ ವಾಕ್ಯದಿಂದಲೂ, ಅದನ್ನು ಘೋಷಿಸುವ ಮತ್ತು ಆದರ್ಶಪ್ರಾಯರಾಗಿರುವ ಇತರೇ ಕ್ರೈಸ್ತ ಭಕ್ತರ ಜೀವನದ ತತ್ವಗಳನ್ನು ಅಳವಡಿಸಿಕೊಂಡು ಅವುಗಳಿಂದ ತನ್ನ ಗುಣವನ್ನು ಸ್ಥಿರಪಡಿಸಿ, ತನ್ನದೇ ಆದ ವೈಯಕ್ತಿಕ ಆತ್ಮಿಕ ಗುಣವನ್ನು ಪಡೆಯಬೇಕು. ಹೀಗೆ ಪಡೆದಿರುವ ಈ ವೈಯಕ್ತಿಕ ಆತ್ಮಿಕ ಗುಣ ನಮ್ಮಲ್ಲಿ ಹೇಗೆ ನೆಲೆಗೊಂಡಿರಬೇಕೆಂದರೆ, ನಮ್ಮ ಆತ್ಮಿಕ ಜೀವನದ ಬೆಳವಣಿಗೆಗೆ ಸಹಕರಿಸಿ ನಮ್ಮನ್ನು ಪೋಷಿಸಿದಂತಹ ಸಹೋದರನಾಗಲಿ, ಸಹೋದರಿಯಾಗಲಿ ಬಿದ್ದು ಹೋದರೂ, (ಇದನ್ನು ಅಪೋಸ್ತಲನು ಸಾಧ್ಯತೆ ಇದೆ ಎಂದು ಇಬ್ರಿಯ 6:4-6 ಮತ್ತು ಗಲಾತ್ಯ 1:8ರಲ್ಲಿ ತೋರಿಸಿದ್ದಾನೆ.) ನಾವು ನಮ್ಮ ಆತ್ಮೀಕ ಜೀವನದಲ್ಲಿ ಮುಂದುವರೆದು ದೇವರ ಸತ್ಯದ ಆತ್ಮವನ್ನು ನಮ್ಮದಾಗಿಸಿಕೊಳ್ಳಲು ಸಮರ್ಥರಾಗುತ್ತೇವೆ-Z ’03, 375 R3250

