29 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ; ಅವರಿಗೆ ದಂಡನೆ ಖಂಡಿತ ................... ಙ್ಞಾನೋಕ್ತಿಗಳು 16:5
ಕ್ರೈಸ್ತನಾದವನಿಗೆ ಪರೀಕ್ಷೆಗಳಲ್ಲಿ ಕಠಿಣವಾದದ್ದು ಯಾವುದೆಂದರೆ ಪ್ರಾಪಂಚಿಕತೆಯ ಪ್ರೀತಿಯನ್ನು ಅಹಂಕಾರವೆಂಬ ನಾಯಕತ್ವದಲ್ಲಿ ಜಯಗಳಿಸುವದಾಗಿದೆ. ಪ್ರಾಪಂಚಿಕ ಅಹಂಕಾರವು ದೇವರಲ್ಲಿನ ನಂಬಿಕೆಯನ್ನು ಮತ್ತು ವಿಧೇಯತ್ವವನ್ನು ವಿರೋಧಿಸುತ್ತದೆ. ಯಾರು ದೇವರಲ್ಲಿ ಯಥಾರ್ಥವಾದ ವಿಶ್ವಾಸವಿಟ್ಟಿರುವರೋ ಮತ್ತು ಧೈರ್ಯವುಳ್ಳವರಾಗಿರುವರೋ ಅಂಥಹವರು ಅಹಂಕಾರವೆಂಬ ರಾಕ್ಷಸನನ್ನು ಜಯಿಸಬಹುದು. ಇದಲ್ಲದೆ ಈ ಜಯವನ್ನು ಪೂರ್ಣವಾಗಿ ಸಾಧಿಸುವದು ಬಹು ಅವಶ್ಯ. ಅಹಂಕಾರವನ್ನು ಸಂಪೂರ್ಣವಾಗಿ ತುಳಿದುಹಾಕಬೇಕು. ಅದು ಇನ್ನೆಂದಿಗೂ ತಲೆ ಎತ್ತಿ ನಮ್ಮನ್ನು ನಾಶಪಡಿಸದಂತೆ ಅದನ್ನು ನಾವು ನಾಶಪಡಿಸಬೇಕು. ಇದು ಒಂದು ವೈಯಕ್ತಿಕ ಹೋರಾಟ. ಈ ರಾಕ್ಷಸನನ್ನು ನಾಶಪಡಿಸಲು ಯೋಗ್ಯವಾದ ಆಯುಧವು ತೊರೆಯ ದಡದಲ್ಲಿರುವ ಒಂದು ‘ಸಾಣೆ ಕಲ್ಲು’ - ಅಂದರೆ ಕರ್ತನ ಸಂದೇಶ; ಕರ್ತನಿಗೆ ಯಾವದು ಮೆಚ್ಚಿಕೆಯಾಗಿದೆಯೇ ಅಥವಾ ಆತನ ದೃಷ್ಟಿಯಲ್ಲಿ ಯಾವುದು ಸರಿಕಾಣುತ್ತದೆ ಎಂಬುದನ್ನು ಈ ಸಂದೇಶ ಸೂಚಿಸುತ್ತದೆ. ಅಲ್ಲದೆ, ಕರ್ತನು ಭರವಸೆ ಕೊಡುವ ಮಾತು ಏನೆಂದರೆ, “ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನು ಹೆಚ್ಚಿಸಲ್ಪಡುವನು. ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು”, ಎಂಬುದೇ ಒಬ್ಬ ಕವಿ ಹೇಳಿರುವಂತೆ - ಎಲ್ಲಿ ಜಂಬಕೊಚ್ಚಿಕೊಳ್ಳುವದು ಅಂತ್ಯವಾಗುತ್ತದೋ ಅಲ್ಲಿ ನಿಜವಾದ ಗೌರವ ಪ್ರಾರಂಭವಾಗುವದು-Z ’03, 329 (R3230). R3231

