12 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ. ಲೂಕನು 21:19
ಅಪೋಸ್ತಲನಾದ ಯಾಕೋಬನು ಹೇಳಿದಂತೆ, “ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ, ಏನೂ ಕಡಿಮೆ ಇಲ್ಲದವರೂ ಆಗಿರುವಿರಿ”(1:4). ಈ ತಾಳ್ಮೆಯಲ್ಲಿ ಇನ್ನಿತರ ಕೃಪಾಗುಣಗಳು ಸ್ವಲ್ಪಮಟ್ಟಿಗೆ ಸೇರಿವೆ ಎಂಬದು ಖಚಿತವಾಗಿ ದೃಡಪಟ್ಟಿದೆ. ದೇವಜನರಲ್ಲಿ ನಂಬಿಕೆಗೆ ಮೊದಲು ತಾಳ್ಮೆ ಇರಬೇಕು. ತಾಳ್ಮೆ ಎಂಬುದು ಎಷ್ಟರಮಟ್ಟಿಗೆ ಇರುತ್ತದೋ ಅಷ್ಟರಮಟ್ಟಿಗೆ ನಂಬಿಕೆಯು ಕೂಡಾ ಇರುವದು. ಕ್ರೈಸ್ತನೆನಿಸಿಕೊಂಡವನು ತಾಳ್ಮೆ ಇಲ್ಲದವನಾಗಿ ಅಶಾಂತಿಯಿಂದ ಕೂಡಿದವನಾದರೆ ಕರ್ತನ ನಂಬಿಕೆಯಲ್ಲಿ ಕೊರತೆಯುಳ್ಳವನಾಗಿರುವನು. ತಾಳ್ಮೆ ಇದ್ದಲ್ಲಿ ಅವನು ಕರ್ತನ ಕೃಪಾವಾಗ್ದಾನಗಳಲ್ಲಿ ವಿಶ್ರಾಂತಿ ಪಡೆದು ಅದರ ನೆರವೇರಿಕೆಗೆ ಕಾದಿರುವನು. ಇದಲ್ಲದೆ, ತನ್ನ ಎಲ್ಲಾ ಬಲವನ್ನು ಶ್ರದ್ಧೆಯಿಂದ ಸಕಾರಣವಾಗಿ ಉಪಯೋಗಿಸಿ ಕರ್ತನ ಹತೋಟಿಯಲ್ಲಿರುವ ಕಾಲಗಳು ಮತ್ತು ಸಮಯಗಳನ್ನು ತಿಳಿದವನಾಗಿ ತನಗಿರುವದರಲ್ಲಿ ಸಂತೃಪ್ತನಾಗಿದ್ದು ಫಲಿತಾಂಶವನ್ನು ಕರ್ತನಿಗೆ ಬಿಡುವನು-Z ’03, 361 R3245

