20 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಸದಮಲನೆನಿಸಿಕೊಂಡು ಶಾಶ್ವತ ಲೋಕದಲ್ಲಿ ನಿತ್ಯ ನಿವಾಸಿಯಾದ ಮಹೋನ್ನತನು ಹೀಗನ್ನುತ್ತಾನೆ - ಉನ್ನತ ಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿಹೋದ ದೀನ ಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನು ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ. ಯೆಶಾಯ 57:15
ಜಜ್ಜಿಹೋದ ದೀನಮನಸ್ಸನ್ನು ದೇವರು ಎಂದಿಗೂ ತಿರಸ್ಕರಿಸುವದಿಲ್ಲ ಮತ್ತು ನಿರಾಕರಿಸುವದಿಲ್ಲ ಎಂಬದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ದೇವಜನರು ಯಾವುದಾದರೂ ಕಷ್ಟದಲ್ಲಿ ಸಿಕ್ಕಿಕೊಂಡು ಬೀಳುವ ಹಾಗಿದ್ದರೆ ಅಂತಹವರು ಕರ್ತನ ಅನ್ಯೋನ್ಯತೆಗೂ ಮತ್ತು ಕ್ಷಮೆಯಾಚನೆಗೆ ತವಕಪಡುವವರಾದರೆ ಮತ್ತು ಅವರ ಹೃದಯ ಜಜ್ಜಲ್ಪಟ್ಟು ದೀನನಾಗಿರುವವರಾದರೆ ಅವರು ನಿರಾಶರಾಗದೆ, ದೇವರು ಕ್ರಿಸ್ತನು ಕೊಟ್ಟ ಈಡಿನ ಮೂಲಕ ಉಚಿತವಾಗಿ ನೀತಿ ನಿರ್ಣಯ ಹೊಂದಿದವರಾಗಿ ಅವರು ತಮ್ಮ ಪಾಪಗಳನ್ನು ಕ್ರಿಸ್ತನ ರಕ್ತದಲ್ಲಿ ನಂಬಿಕೆಯಿಟ್ಟು ಅರಿಕೆ ಮಾಡುವದಾದರೆ ಕ್ಷಮಿಸಲ್ಪಡುವರು ಮತ್ತು ಜಜ್ಜಿಹೋದ ದೀನ ಹೃದಯುವಳ್ಳವರು ಪಾಪ ಮಾಡುವ ಪಕ್ಷಕ್ಕೆ ಅದು “ಮರಣಕರವಲ್ಲದ ಪಾಪ” ಎಂಬುದಾಗಿ ತಿಳಿಯಬೇಕು. ಯಾಕಂದರೆ, ಅಪೋಸ್ತಲನು ಹೇಳುವದೇನೆಂದರೆ, “ಮರಣಕರವಾದ ಪಾಪ ಮಾಡಿದವರಲ್ಲಿ ತಿರಿಗಿ ಮಾನಸಾಂತರ ಹುಟ್ಟಿಸುವದು ಅಸಾಧ್ಯ”-Z ’03, 383 (R3253). R3255

