23 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವದು ಅವಶ್ಯವೆಂದು ತೋಚಿತು. ಯೂದನು 1:3
ದೇವರ ವಾಕ್ಯವನ್ನು ಎತ್ತಿ ಹಿಡಿಯುವುದು ನಂಬಿಕೆಯ ಪರವಾಗಿ ಹೋರಾಡುವ ಬಹುಪಾಲು ಕಾರ್ಯವಾಗಿದೆ ಹಾಗೂ ದೇವರ ಗುಣವನ್ನು ಸಮರ್ಥಿಸುವದಾಗಿದೆ. ಅಂದರೆ, ಇದು ನಾವು ಸತ್ಯಕ್ಕಾಗಿ ಸಂತೋಷದಿಂದ ತಾಳುವ ನಿಲುವು ಮಾತ್ರವಲ್ಲದೆ, ಅದಕ್ಕೆ ವಿರೋಧವಾಗಿ ಬರುವ ಆಕ್ರಮಣಗಳನ್ನು ಎದುರಿಸಿ ಅವಶ್ಯವಾಗಿ ಹೋರಾಡುವದಾಗಿದೆ. ನಾವು ಹೋರಾಡುವದು ಮಾನವ ಕಲ್ಪಿತ ಬೋಧನೆಗಳು ಮತ್ತು ಅಭಿಪ್ರಾಯಗಳು ಮಾತ್ರವಲ್ಲದೆ, ಕಲ್ಪನೆಯ ವಿಚಾರಧಾರೆಗಳಾಗಿವೆ. ಇವುಗಳು ನಮ್ಮ ಕರ್ತನಿಂದಲೂ, ಅಪೋಸ್ತಲರಿಂದಲೂ ಬೋಧಿಸಲ್ಪಟ್ಟು ಎಲ್ಲಾ ಮನುಷ್ಯರಿಗೆ ವಾಗ್ದಾನ ಮಾಡಲ್ಪಟ್ಟ ಶುಭ ಸಮಾಚಾರವನ್ನು ಅಪಾರ್ಥ ಮಾಡುವ ದುರ್ಬೋಧನೆಗಳ ಬಗ್ಗೆ ವಿರೋಧವಾಗಿ ಹೋರಾಡುವದಾಗಿವೆ. ಅಪೋಸ್ತಲನು ಮತ್ತೊಂದು ಕಡೆ “ನಾನು ಸುವಾರ್ತೆಯನ್ನು ಖಂಡಿತವಾಗಿ ಪ್ರತಿಪಾದಿಸುವವನಾಗಿದ್ದೇನೆ” ಎಂದು ಹೇಳಿದ್ದಾನೆ. ನಾವು ಸತ್ಯವನ್ನಲ್ಲದೆ ಬೇರೆ ಏನನ್ನೂ ಪ್ರತಿಪಾದಿಸುವದಿಲ್ಲ. ಸತ್ಯವು ದೇವರ ಕಾರ್ಯನಿರ್ವಾಹಕವಾಗಿರುವದಲ್ಲದೆ, ಕ್ರಿಸ್ತನನ್ನು ನಿರೂಪಿಸುವದಾಗಿದೆ. ಆದುದರಿಂದ, ಈ ಕಾರ್ಯವು ನಮ್ಮ ಆದ್ಯ ನಿಲುವಾಗಿದೆ. ಕ್ರಿಸ್ತನಲ್ಲಿ ನೈಜವಾದ ಸೈನಿಕರಾಗಿ ಈ ನಿಲುವನ್ನು ಸಾಯುವತನಕ ಪ್ರತಿಪಾದಿಸುತ್ತೇವೆ-Z ’03, 423 (R3272). R3274

