13 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು! ಕೀರ್ತನೆಗಳು 133:1
ನಮ್ಮ ಕರ್ತನಂತೆ ನಾವು ಸಮಾಧಾನವನ್ನು ಹಾರೈಸಿ, ಎಲ್ಲಾ ಸಹೋದರರೊಂದಿಗೆ ಒಂದಾಗಿರೋಣ. ಆತ್ಮದಲ್ಲಿಯೂ ಒಂದಾಗಿದ್ದು ಸಮಾಧಾನವೆಂಬ ಸಂಕೋಲೆಯಿಂದ ಕಟ್ಟಲ್ಪಟ್ಟು ಒಂದಾಗಿರೋಣ. ನಮ್ಮ ಚಟುವಟಿಕೆಗಳು ನಮ್ಮ ಹೋರಾಟವು, ನಮ್ಮ ವಿರೋಧಿ ಮತ್ತು ಪಾಪ ಸಂಬಂಧವಾದ ಎಲ್ಲಾ ವಿಷಯಗಳ ಮೇಲೆಯೂ ಮತ್ತು ಬಿದ್ದುಹೋಗಿರುವ ನಮ್ಮ ಶರೀರದ ಅಂಗಗಳ ವಿರುದ್ಧವಾಗಿಯೂ ಇದೆ. ಹೀಗೆ ನಾವು ಮತ್ತು ನಮ್ಮ ಸಹೋದರರು ನಮ್ಮ ಸ್ವಭಾವ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲೆ ಹೋರಾಡಲು ನಮ್ಮನ್ನು ನಾವು ಕರ್ತನು ಮೆಚ್ಚುವ ರೀತಿಯಲ್ಲಿ ತೊಡಗಿಸಿಕೊಳ್ಳೋಣ. ಆಗ ನಾವು ಪ್ರೀತಿಪೂರ್ವಕವಾಗಿ ಸಹಾಯ ಮಾಡಲು ಅಡಕವಾಗಿರುವ ಪ್ರತಿಯೊಂದು ಗುಣವನ್ನು ಉಪಯೋಗಿಸಿ ಒಬ್ಬರನ್ನೊಬ್ಬರು ಉತ್ತೇಜನ ಕೊಟ್ಟು ಅಭಿವೃದ್ಧಿಯಾಗಲಿಕ್ಕೂ ಮತ್ತು ಸಮಯವಿರಲಾಗಿ ಎಲ್ಲರಿಗೂ ಒಳ್ಳೇದನ್ನು ಮಾಡುತ್ತಾ, ಅದರಲ್ಲೂ ಮುಖ್ಯವಾಗಿ ಮನೆವಾರ್ತೆಯಲ್ಲಿರುವವರೆಲ್ಲರಿಗೂ ಮಾಡೋಣ-Z ’03, 363 (R3245). R3246

