24 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೆನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ. ೧ ಕೊರಿಂಥದವರಿಗೆ 9:27
ನಮ್ಮ ಭೌತಿಕ ಶರೀರವು ಮರಣಾವಸ್ಥೆಯಿಂದ ಪುನಃ ಎದ್ದು ಬರುವ ಪ್ರವೃತ್ತಿಯಿಂದ ಕೂಡಿರುವದು. ಹೀಗಿರುವಲ್ಲಿ ನಮ್ಮಲ್ಲಿರುವ ನೂತನ ಸೃಷ್ಟಿಯು ಯಾವಾಗಲೂ ಎಚ್ಚರಿಕೆಯಿಂದಿದ್ದು ಶಾರೀರಿಕ ಪ್ರವೃತ್ತಿಯು ಮೇಲೇಳದಂತೆ ಅದನ್ನು ನಿಯಂತ್ರಣದಲ್ಲಿರಿಸಿ, ನಂಬಿಗಸ್ತರಾಗಿದ್ದು ನಮ್ಮ ಈ ಒಳ್ಳೆಯ ಹೋರಾಟವನ್ನು ಮುಂದುವರಿಸಿ, ನಮ್ಮ ಮುಂದಿಟ್ಟಿರುವ ಬಹುಮಾನವನ್ನು ಪಡೆಯಲು ಜಯಶಾಲಿಗಳಾಗೋಣ. ಈ ಯುದ್ಧ ಅಂದರೆ, ನಮ್ಮ ನೂತನ ಮನಸ್ಸಿಗೂ ಮತ್ತು ನಮ್ಮ ಭೌತಿಕ ಶರೀರಕ್ಕೂ ಇರುವ ವಿರುದ್ಧವಾದ ಹೋರಾಟ. ಇದು ಒಂದು ಒಳ್ಳೆಯ ಹೋರಾಟ. ಏಕೆಂದರೆ, ಅದು ಬಿದ್ದುಹೋಗಿರುವ ಮಾನವ ಸ್ವಭಾವ ಅಂದರೆ, ಪಾಪ ಮತ್ತು ಬಲಹೀನತೆಯ ವಿರುದ್ಧವಾದದ್ದಾಗಿದೆ. ಇದೇ ನಂಬಿಕೆಯ ಹೋರಾಟವಾಗಿರುತ್ತದೆ. ಅಂದರೆ, ಕ್ರೈಸ್ತ ನಂಬಿಕೆಯಲ್ಲಿರುವ ಪ್ರತಿಯೊಬ್ಬನು ತನ್ನ ಇಡೀ ಜೀವನದ ಉದ್ದ ಮಾಡುವ ಹೋರಾಟವಾಗಿದೆ. ಇದರ ಬಗ್ಗೆ ಅಪೋಸ್ತಲನು, “ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ”, ಎಂದು ಹೇಳಿದ್ದಾನೆ. ಈ ನಂಬಿಕೆಯು ಹೇಳುವದೇನೆಂದರೆ, ಯುದ್ಧ ತನ್ನ ಶರೀರದ ಪ್ರವೃತ್ತಿಯ ಮೇಲೆ ಮಾಡುವದಾಗಿದೆ ಮತ್ತು ನಮ್ಮ ನಂಬಿಕೆಯನ್ನು ಕರ್ತನು ಮಾಡಿರುವ ವಾಗ್ದಾನದ ಮೇಲೆ ಇರಿಸಿಕೊಂಡು ಈ ಯುದ್ಧವನ್ನು ಆತನ ಸಹಾಯವಿಲ್ಲದೆ ಮುಂದುವರಿಸಲು ಸಾಧ್ಯವಾಗುವದಿಲ್ಲ-Z ’03, 425 (R3272). R3275

