25 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಕ್ರಿಸ್ತ ಯೇಸು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿ ಶುದ್ಧೀಕರಣ ವಿಮೋಚನೆಗಳಿಗೆ ಕಾರಣನಾದನು. ೧ ಕೊರಿಂಥದವರಿಗೆ 1:30
ಯಾವಾತನು ನಮ್ಮನ್ನು ವಿಮೋಚಿಸಿ ಅಥವಾ ತನ್ನನ್ನು ಯಜ್ಞವನ್ನಾಗಿ ಸಮರ್ಪಿಸಿ ನಮ್ಮನ್ನು ಕೊಂಡುಕೊಂಡನೋ ಆತನೇ ನಮ್ಮ ಪ್ರವಾದಿ, ಬೋಧಕ, ಸುವಾರ್ತೆಯ ಜ್ಞಾನವಾಗಿ ನಮ್ಮ ಬಿದ್ದುಹೋಗಿರುವ ಸ್ಥಿತಿಯಲ್ಲಿ ನಮಗೆ ಸಹಾಯಕನಾಗಿ ಮತ್ತು ನಮ್ಮ ಮಹಾಯಾಜಕನಾಗಿ ಮೊದಲು ನಮ್ಮನ್ನು ನೀತಿಯುತರೆಂದು ನಿರ್ಣಯಿಸಿ ನಮ್ಮನ್ನು ಶುದ್ಧೀಕರಿಸಿ ಅಥವಾ ನಾವು ಪ್ರತಿಷ್ಠೆಪಡಿಸಿಕೊಳ್ಳುವಂತೆ ಮಾಡಿ ಕೊನೆಯಲ್ಲಿ ನಮ್ಮ ರಾಜನಾಗಿ ನಂಬಿಗಸ್ತರಾದ ನಮ್ಮನ್ನು ಪಾಪ ಮತ್ತು ಮರಣದ ವಶದಿಂದ ಬಿಡುಗಡೆ ಮಾಡಿ ಆತನ ರಾಜ್ಯದಲ್ಲಿ ಮಹಿಮಾ ಪದವಿಯನ್ನು ಪಡೆಯಲು “ದೇವರು ಕ್ರಿಸ್ತನ ಮುಖಾಂತರ ನಮ್ಮನ್ನು ಸತ್ತವರೊಳಗಿಂದ ಎಬ್ಬಿಸುವನು”. “ಹಲ್ಲೆಲೂಯ ಎಂಥಹ ವಿಮೋಚಕ!” ನಿಜವಾಗಿಯೂ ಆತನು ದೇವರ ಬಳಿಗೆ ಬರುವ ಎಲ್ಲರನ್ನು ರಕ್ಷಿಸುವದಕ್ಕೆ ಸಮರ್ಥನಾಗಿದ್ದಾನೆ-Z ’03, 440 (R3279). R3281

