19 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆಪಡಿಸು, ನಿನ್ನ ವಾಕ್ಯವೇ ಸತ್ಯವು. ಯೋಹಾನನು 17:17
ನಮ್ಮ ಕರ್ತನು ಯಾವಾಗಲು ನಮ್ಮ ಆತ್ಮೀಕ ಜೀವನದ ಮುಂದುವರಿಕೆ ಮತ್ತು ಅಭಿವೃದ್ಧಿಯನ್ನು ನಾವು ಸತ್ಯವನ್ನು ಅಂಗೀಕರಿಸಿ ಅದಕ್ಕೆ ವಿಧೇಯರಾಗಿರುವದಕ್ಕೆ ಸಂಬಂಧಿಸುತ್ತಾನೆ. ಪ್ರತಿಯೊಬ್ಬ ದೇವರ ಮಗನು ಎಚ್ಚರಿಕೆಯಿಂದಿರಬೇಕು; ಯಾಕೆಂದರೆ, ಕೆಲವರು ತಮ್ಮನ್ನು ತಾವು ಮುಂದುವರೆದ ಕ್ರೈಸ್ತರು ಎಂಬುದಾಗಿ ಹೇಳಿ ದೇವರ ವಾಕ್ಯಕ್ಕಿಂತ ಮುಂದುವರೆದಿದ್ದೇವೆ ಎಂತಲೂ, ಪವಿತ್ರಾತ್ಮನು ಅಥವಾ ಕ್ರಿಸ್ತನು ದೇವರ ವಾಕ್ಯವನ್ನು ಹೊರತುಪಡಿಸಿ, ತಮ್ಮೊಂದಿಗೆ ನೇರವಾಗಿ ಸ್ವತಂತ್ರವಾಗಿ ಮಾತಾಡುತ್ತಾನೆ ಎಂಬುದಾಗಿ ಹೇಳುತ್ತಾರೆ. ಇಂತಹ ನಡವಳಿಕೆ ಆತ್ಮೀಕ ಅಹಂಕಾರ ಮತ್ತು ಹೊಗಳಿಕೊಳ್ಳುವದನ್ನು ಕಲಿಸುತ್ತದೆ. ಆಗ ಪವಿತ್ರ ದೈವೋಕ್ತಿಗಳಲ್ಲಿ ಕೊಟ್ಟಿರುವ ಎಚ್ಚರಿಕೆಯ ಮಾತುಗಳನ್ನು, ಬುದ್ಧಿವಾದ ಬೋಧನೆಗಳನ್ನು ದುರ್ಬಲಗೊಳಿಸುತ್ತೆ. ಏಕೆಂದರೆ, ಇಂತಹ ತಪ್ಪು ದಾರಿ ಹಿಡಿದವನು ಉನ್ನತಮಟ್ಟ ಬೋಧನೆ ತನ್ನಲ್ಲಿಯೇ ಇದೆ ಎಂಬುದಾಗಿ ತಿಳಿದುಕೊಳ್ಳುವನು. ಇಂತಹವರ ವಿಷಯದಲ್ಲಿ ಸೈತಾನನು ಅವರ ತಪ್ಪು ತಿಳುವಳಿಕೆಯನ್ನು ಆಧಾರ ಮಾಡಿಕೊಂಡು ಅವರನ್ನು ತನ್ನ ವಶಕ್ಕೆ ತೆಗೆದುಕೊಂಡು ತನ್ನ ಇಷ್ಟದಂತೆ ನಡೆಸುತ್ತಾನೆ-Z ’377 (R3250). R3251

