3 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವ ಜ್ಞಾನವೇ ಇಷ್ಟ. ಹೋಶೇ 6:6
ಕರ್ತನಿಗೆ ತಮ್ಮ ಹೃದಯ ಮತ್ತು ಚಿತ್ತಗಳನ್ನು ಕೊಡುವವರೆಲ್ಲರೂ ತಮ್ಮ ಸರ್ವಸ್ವವನ್ನು ಕೊಟ್ಟಂತೆ ಭಾವಿಸಲಾಗಿದೆ. ಆದರೆ, ಯಾರು ತಮ್ಮ ಚಿತ್ತ ಮತ್ತು ವಿಧೇಯತ್ವವನ್ನು ಕರ್ತನಿಗೆ ಸಲ್ಲಿಸುವದಿಲ್ಲವೋ, ಅವರೆಲ್ಲರೂ ಕರ್ತನು ಮೆಚ್ಚುವÀ ಯಜ್ಞಗಳನ್ನು ಅರ್ಪಿಸಲು ಸಾಧ್ಯವಾಗುವದಿಲ್ಲ. “ಯಜ್ಞ(ತ್ಯಾಗ)ಕ್ಕಿಂತ ವಿಧೇಯತ್ವವೇ ಶ್ರೇಷ್ಠ” ಎಂಬ ಈ ಪಾಠ ಕ್ರಿಸ್ತನಲ್ಲಿ ಪ್ರತಿಷ್ಠೆಪಡಿಸಿಕೊಂಡಿರುವÀ ಹೃದಯಗಳಲ್ಲಿ ಆಳವಾಗಿ ನಾಟಬೇಕು. ವಿಧೇಯತ್ವವುಳ್ಳ ಆತ್ಮವು ಅವಶ್ಯಕವಾಗಿರುವದಲ್ಲದೆ, ಅದು ಯಾರಲ್ಲಿರುವದೋ ಅವರು ದೈವ ಚಿತ್ತವನ್ನು ಹೆಚ್ಚೆಚ್ಚಾಗಿ ತಿಳಿಯಲು ಪ್ರಯತ್ನಿಸಿ, ಆ ಚಿತ್ತಕ್ಕನುಗುಣವಾಗಿ ಸಂಪೂರ್ಣವಾದ ವಿಧೇಯತ್ವದಲ್ಲಿರುತ್ತಾರೆ. ಈ ತರಗತಿಯಲ್ಲಿರುವವರನ್ನು ಕುರಿತು ದೈವೋಕ್ತಿಗಳು ಹೇಳುವದೇನಂದರೆ, “ನನಗೆ ವಾಕ್ಯವು ದೊರೆಯಿತು ಮತ್ತು ನಾನು ಅದನ್ನು ಆಹಾರವಾಗಿ ಊಟ ಮಾಡಿದೆನು” ಎಂತಲೂ, ಮತ್ತೊಂದು ಕಡೆ ಕರ್ತನು “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರದದೆ”, ಮತ್ತು “ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಎಂದು ಹೇಳಿದ್ದಾನೆ-Z ’03, 220 (R3224). R3225

