14 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ, ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು. ...... ಒಬ್ಬನು ಅನ್ಯಾಯವಾಗಿ ಬಾಧೆ ಪಡುವವನಾಗಿದ್ದು, ದೇವರು ನೋಡುತ್ತಾನೆಂದು ಅರಿತು, ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘವಾಗಿದೆ. ೧ ಪೇತ್ರನು 2:12, 19
ನಮ್ಮ ಬಗ್ಗೆ ಕೆಟ್ಟದನ್ನು ಅಪೇಕ್ಷಿಸಿ ನಮ್ಮನ್ನು ದೂಷಿಸಿದರೂ, ನಮ್ಮ ನಿಲುವನ್ನು ಅರ್ಥಮಾಡಿಕೊಂಡಿರುವವರು ಮಾತ್ರ ನಮ್ಮ ಸಂಗಡ ವ್ಯವಹಾರ ಮಾಡುವರು. ನಾವು ಪ್ರಾಮಾಣಿಕರಾಗಿ ತತ್ವಗಳನ್ನು ಅನುಸರಿಸುವವರು ಎಂಬುದನ್ನು ಅನುಭವದ ಮೂಲಕ ತಿಳಿದು ನಮ್ಮ ದಿನನಿತ್ಯದ ಜೀವನದಲ್ಲಿ ನಮ್ಮ ಬಾಯಿಂದ ಬರುವ ಮಾತುಗಳು ಮತ್ತು ನಾವು ಹೃದಯಪೂರ್ವಕವಾಗಿ ಧ್ಯಾನ ಮಾಡುವದು ಕರ್ತನಿಗೆ ಮೆಚ್ಚಿಕೆಯಾಗಿ ಕಾಣಬರುವದು. ಆತನ ಹೆಸರಿಗೂ ಮತ್ತು ಆತನ ಉದ್ದೇಶಗಳಿಗೂ ಘನತೆ ತರುವುದಲ್ಲದೆ, ಹಾಗೆಯೇ ಕ್ರಿಸ್ತನ ಮೂಲಕ ತಂದೆ ದೇವರನ್ನು ಮಹಿಮೆಪಡಿಸುವದಾಗಿದೆ. ಆತನಿಗೆ ಎಲ್ಲಾ ಮಹತ್ವ ಮಹಿಮೆಗಳು ಆತನ ರಾಜ್ಯದಲ್ಲಿ ನಿರಂತರವಾಗಿ ಉಂಟಾಗುವದು-Z ’03, 365 (R3246). R3248

