26 ಸೆಪ್ಟೆಂಬರ್ರ ದೈನಂದಿನ ಭಕ್ತಿಚಿಂತನೆ
ಅಪೋಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಯೇಸುಕ್ರಿಸ್ತನೇ ಮುಖ್ಯವಾದ ಮೂಲೆಗಲು;್ಲ ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ. ಎಫೆಸದವರಿಗೆ 2:20-22
ದಿನ ದಿನವು ಉರುಳಿದಂತೆ ನಮಗೂ ಮತ್ತು ದೇವಾಲಯಕ್ಕೂ ಇರುವ ಮೂರು ಸಂಬಂಧಗಳನ್ನು ಜ್ಞಾಪಿಸಿಕೊಳ್ಳೋಣ. (1) ನಾವು ಜೀವವುಳ್ಳ ಕಲ್ಲುಗಳಾಗಿ ತಯಾರಾಗುತ್ತಿರುವ ಸ್ಥಿತಿಯಲ್ಲಿದ್ದೇವೆ. (2) ನಾವು ರಾಜವಂಶಸ್ಥರಾದ ಯಾಜಕರಾಗಿ ದೇವರ ಮಂಜೂಷವನ್ನು ಹೊತ್ತುಕೊಂಡು ಗುಡಾರದ ಸ್ಥಿತಿಯಿಂದ ದೇವಾಲಯದ ಸ್ಥಿತಿಗೆ ಹೋಗುತ್ತಿದ್ದೇವೆ. ಕೆಲವು ಸದಸ್ಯರು ಈಗಾಗಲೇ ದೇವಾಲಯದೊಳಗೆ ಪ್ರವೇಶಿಸಿದ್ದಾರೆ. ಇನ್ನೂ ಕೆಲವರು ಮಾರ್ಗದಲ್ಲಿದ್ದಾರೆ. (3) ಕರ್ತನ ಜನರಾಗಿ ನಾವು ತಿಳುವಳಿಕೆಯಿಂದ ಗ್ರಹಿಸಲು, ದೈವ ಕೃಪೆಯ ಹೊಸ ಹಾಡನ್ನು ಹಾಡಲು ಈ ಸಮಯವು ಒದಗಿ ಬಂದಿದೆ. ಈ ಸಮಯದಲ್ಲಿ ನಾವು ನೀತಿ, ನ್ಯಾಯ ಮತ್ತು ಪ್ರೀತಿಗಳಿಂದ ಕೂಡಿದ ಸತ್ಯವೇದದ ಹಾಡನ್ನು ಹಾಡೋಣ. ಹೀಗೆ ಈ ಮೂರು ಅಂಶಗಳಲ್ಲೂ ನಂಬಿಗಸ್ತರಾಗಿ ನಮ್ಮ ನಮ್ಮ ಭಾಗಕ್ಕೆ ಬಂದಿರುವ ಕಾರ್ಯವನ್ನು ಪೂರ್ಣಗೊಳಿಸೋಣ. ನಮ್ಮ ಪ್ರಯಾಣವು ಆದಷ್ಟು ಬೇಗ ಮುಗಿದು ದೇವಾಲಯವು ಕರ್ತನ ಮಹಿಮೆಯಿಂದ ಆವರಿಸಲ್ಪಡುವದು-Z ’03, 443 (R3282). R3284

