3 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ದೇಶ ನಿವಾಸಿಗಳನ್ನೂ ಅನ್ಯಜನರಿಂದ ತಂದ ಹೆಂಡತಿಯರನ್ನೂ ಬಿಟ್ಟು ಬೇರೆಯಾಗಿರಿ. ಎಜ್ರನು 10:11
ಒಬ್ಬರ ಹಿತವಚನದಂತೆ ಲೋಕದಲ್ಲಿರುವ ಕ್ರೈಸ್ತನು ಸಾಗರದಲ್ಲಿರುವ ಹಡಗು ಇದ್ದಂತೆ. ಸಮುದ್ರದ ನೀರು ಹಡಗಿನಲ್ಲಿರದಿದ್ದರೆ, ಹಡಗು ಸುರಕ್ಷಿತವಾಗಿರುವದು. ಕ್ರೈಸ್ತ ಸಮುದಾಯದಲ್ಲಿರುವ ಅನೇಕ ತೊಡಕುಗಳಲ್ಲಿ ಒಂದು ತೊಡಕು ಯಾವದೆಂದರೆ, ಅನ್ಯದೇಶಸ್ತರನ್ನು, ಆಗಂತಕರನ್ನು ಸೇರಿಸಿ ಅವರನ್ನು ಕ್ರೈಸ್ತರೆಂಬದಾಗಿ ಪರಿಗಣಿಸಿರುವದು. ಇದು ಕ್ರೈಸ್ತರನ್ನ ಘಾಸಿಪಡಿಸಿ ಅವರ ದರ್ಜೆಯನ್ನ ಕೆಳಕ್ಕಿಳಿಸುವದಲ್ಲದೆ, (ಸರಾಸರಿ ಪ್ರಮಾಣವನ್ನು ಪರಿಗಣಿಸಿದೆ.) ಅಪರಿಚಿತರನ್ನು ಹಾನಿಗೊಳಿಸುವುದು. ಅಂದರೆ, ಈ ಅಪರಿಚಿತರು ಹೃದಯ ಪರಿವರ್ತನೆಯಾಗದೆ, ನಾವು ಸುರಕ್ಷಿತವಾಗಿದ್ದೇವೆ ಎಂಬುದಾಗಿ ನಂಬಿ, ತಾವು ಜನರ ಮುಂದೆ ಮರ್ಯಾದಸ್ತರಾಗಿ ಕಾಣಿಸಿಕೊಂಡು ಆಗಾಗ ಸಾಮೂಹಿಕ ಪ್ರಾರ್ಥನೆಯಲ್ಲಿ ನಿರತರಾಗುವರು-Z ’99, 203 (R2510). R2512

