25 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಕ್ರಿಸ್ತನು ಪ್ರತ್ಯಕ್ಷನಾದರೆ, ನಾವು ಆತನ ಹಾಗಿರುವೆವೆಂದು ಬಲ್ಲೆವು. ಯಾಕಂದರೆ, ಆತನಿರುವ ಪ್ರಕಾರವೇ ಆತನನ್ನು ನೋಡುವೆವು. ೧ ಯೋಹಾನನು 3:2
ನಾವು ಅತಿ ಶೀಘ್ರದಲ್ಲಿ ಪುನರುತ್ಥಾನದಲ್ಲಿ ಬದಲಾವಣೆಯಾಗುವ ಅನುಭವವನ್ನು ಹೊಂದುವೆವು ಹಾಗೂ ನಮ್ಮ ವಿಮೋಚಕನಂತೆ ಆಗುವೆವು ಎಂಬ ನಿರೀಕ್ಷೆಯಲ್ಲಿರೋಣ. ಮತ್ತು ಆತನಿರುವ ಹಾಗೆಯೇ ಆತನನ್ನು ನೋಡುವೆವು ಮತ್ತು ಮಹಾ ಮಹಿಮೆಯಲ್ಲಿ ಪಾಲುಗಾರರಾಗುವೆವು. ಅಥವ ಮಹಿಮೆಯುಳ್ಳ ರಾಜ್ಯದಲ್ಲಿ ದೇವರ ಮಕ್ಕಳಾಗಿ ಪ್ರಕಾಶಿಸುವೆವು ಎಂಬ ಈ ಗಂಭೀರ ವಿಷಯಗಳು ನಮ್ಮನ್ನು ಪ್ರೋತ್ಸಾಹಿಸಿ ನಮ್ಮ ಹೃದಯಗಳನ್ನು ಶಕ್ತಿಯುತ ಮಾಡಿ, ನಮ್ಮ ತುಟಿಗಳನ್ನು ಬಲಪಡಿಸಿ ಕರ್ತವ್ಯನಿರತರಾಗುವಂತೆ ಮಾಡುವದು. ನಮಗೆ ಸಿಕ್ಕುವ ಪ್ರತಿಯೊಂದು ಅವಕಾಶ ಮತ್ತು ನಮಗಿರುವ ಹಕ್ಕನ್ನು ನಮ್ಮ ನಾಯಕನಾದ ಕರ್ತನ ಪರವಾಗಿಯೂ ಮತ್ತು ನಂಬಿಕೆಯ ಮನೆವಾರ್ತೆಯವರ ಪರವಾಗಿಯೂ ಚಲಾಯಿಸಿ ಸೇವೆಯಲ್ಲಿ ನಿರತರಾಗೋಣ. ಈ ನಿರೀಕ್ಷೆಯು ಕರ್ತನ ಜನರಿಗೆ ಅನೇಕ ಶತಮಾನಗಳಿಂದ ಅಂಕುರವಾಗಿ ಪರಿಣಮಿಸಿರುವಾಗ, ಈಗ ಕರ್ತನ ಪ್ರತ್ಯಕ್ಷತೆಯಲ್ಲಿ ಜೀವಿಸುತ್ತಿರುವ ನಾವು ಆತನು ಪೂರ್ಣವಾಗಿ ತನ್ನನ್ನು ತಾನು ದೇವರ ರಾಜ್ಯದಲ್ಲಿ ಪ್ರಕಟಗೊಳಿಸುವ ಈ ಸಮಯದಲ್ಲಿ ನಾವು ಎಷ್ಟೋ ಹೆಚ್ಚಾಗಿ ಎದುರು ನೋಡುವವರಾಗಿ ಜೀವಿಸೋಣ-Z ’03, 151 (R3191). R3193

