17 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಪವಿತ್ರಾತ್ಮವನ್ನು ನಂದಿಸಬೇಡಿರಿ. ೧ ಥೆಸಲೊನೀಕದವರಿಗೆ 5:19
ಕರ್ತನ ಜನರಿಗೆ ಮತ್ತು ಆತನ ಸಂಸರ್ಗದಲ್ಲಿದ್ದು, ಆತನ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ ಕರ್ತನ ಆತ್ಮ ಒಂದು ಪ್ರೀತಿಯ ಪವಿತ್ರವಾದ ಜ್ವಾಲೆ. ಈ ಪ್ರೀತಿಯ ಜ್ವಾಲೆಯ ದೈವ ಸಂದೇಶದಿಂದಾಗಿ ಪ್ರತಿಯೊಬ್ಬ ಭಕ್ತನಲ್ಲಿ ಉತ್ತೇಜನ ಕೊಟ್ಟು ಸಭೆಯು ಸಾಮೂಹಿಕವಾಗಿ ಈ ಪವಿತ್ರಾತ್ಮವನ್ನು ಸ್ವೀಕರಿಸಲು ಅನುವು ಮಾಡಿ ಈ ಆತ್ಮವು ಅವರಿಗೆ ಮಾರ್ಗದರ್ಶನ ನೀಡುವುದು. ಎಷ್ಟರಮಟ್ಟಿಗೆ ಸಭೆಯು ಜ್ಞಾನದಲ್ಲಿಯೂ ಮತ್ತು ಪ್ರೀತಿಯಲ್ಲಿಯೂ ಮತ್ತು ಕರ್ತನ ಅನ್ಯೋನ್ಯತೆಯಲ್ಲಿಯೂ ವೃದ್ಧಿಯಾಗುತ್ತದೋ ಅಷ್ಟರಮಟ್ಟಿಗೆ ಈ “ಪ್ರೀತಿಯ ಪವಿತ್ರ ಜ್ವಾಲೆ” ಸಭೆಯನ್ನು ಲೋಕಕ್ಕೆ ಬೆಳಕಾಗಿ ಮಾಡುವದು. ಅದು ಒಂದು ಬೆಟ್ಟದ ಮೇಲಿನ ಪಟ್ಟಣದಂತಿದ್ದು ಮರೆಯಾಗಲಾರದು-Z ’03, 25 (R3135). R3137

