27 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಶರೀರಸಂಬಂಧವಾಗಿ ಅರಿತುಕೊಳ್ಳುವದಿಲ್ಲ. ೨ ಕೊರಿಂಥದವರಿಗೆ 5:16
ಶಾರೀರಿಕ ಬಲಹೀನತೆ ನಮ್ಮಲ್ಲಿ ಆಗಲಿ ಅಥವ ಕ್ರಿಸ್ತನ ಇತರ ಶಿಷ್ಯರಲ್ಲಾಗಲಿ ಇರುವದರ ಬಗ್ಗೆ ಕಾಳಜಿ ವ್ಯಕ್ತಪಡಿಸಬಾರದು ಎಂಬದು ಅಪೋಸ್ತಲನ ಹೇಳಿಕೆಯಲ್ಲ. ಎಲ್ಲಾ ಶಾರೀರಿಕ ಬಲಹೀನತೆಯ ವಿಷಯದಲ್ಲಿ ನಾವು ಕಠಿಣವಾಗಿ ಹೋರಾಡಬೇಕು. ಅವು ಆಗಾಗ್ಗೆ, ನೂತನ ಹೃದಯ, ಮನಸ್ಸು ಮತ್ತು ಚಿತ್ತದ ಹಿತಾಸಕ್ತಿಗಾಗಿ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುವದು. ಇಲ್ಲಿ ನಾವು ಈ ಕಠಿಣ ಕ್ರಮ ಮತ್ತು ಬಲಹೀನ ಮತ್ರ್ಯ ದೇಹ ವಿಭಿನ್ನವಾಗಿರುವದನ್ನು ಗಮನಿಸಬೇಕು. ಈ ರೀತಿ ನಾವು ಪ್ರೀತಿಯನ್ನು ಸಹಾನುಭೂತಿಯನ್ನು ಸಹೋದರ ಸಹೋದರಿಯರಲ್ಲಿ ವ್ಯಕ್ತಪಡಿಸಬೇಕು. ಆದರೂ ಸಹೋದರ ಸಹೋದರಿಯರ ಮತ್ತು ಸಭೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ತಪ್ಪು ಮಾಡಿದಾಗ ಆಕ್ಷೇಪಿಸಿ ಅಥವ ಗದರಿಸಿ ಅವರನ್ನು ತಿದ್ದಿ ಸರಿಪಡಿಸಬೇಕು. ಈ ಎರಡು ತರಗತಿಯವರನ್ನು ನಾವು ಹೇಗೆ ಕಂಡುಹಿಡಿಯಬೇಕು, ಅಂದರೆ, ಪುನರುಜ್ಜೀವಿತವಲ್ಲದವನು ಶಾರೀರಿಕ ಅಭಿಲಾಶೆಯಿಂದ ಕೂಡಿರುವನು. ಪುನರುಜ್ಜೀವಿತವಾಗಿರುವವನು. ಆತ್ಮೀಯ ವಿಷಯಗಳ ಬಗ್ಗೆ ಅಭಿಲಾಶೆಯುಳ್ಳವನಾಗಿರುವನು-Z ’03, 170 (R3200). R3202

