15 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಸಹೋದರರೆ, ಅಕ್ರಮವಾಗಿ ನಡೆಯುವವರಿಗೆ ಬುದ್ಧಿ ಹೇಳಿರಿ ....... ಎಲ್ಲರಲ್ಲಿಯೂ ದೀರ್ಘ ಶಾಂತರಾಗಿರಿ. ೧ ಥೆಸಲೊನೀಕದವರಿಗೆ 5:14
ಕರ್ತನ ಜನರು, ತಮ್ಮನ್ನು ಸಮತೋಲನದಲ್ಲಿ ಇಟ್ಟುಕೊಂಡಿರುವವರು ಬಲಹೀನ ಸಹೋದರರಲ್ಲಿ ಅಲ್ಲದೆ, ಧೈರ್ಯ ಸಾಲದೆ ಇರುವವರಲ್ಲಿಯೂ ಹಾಗೂ ಎಲ್ಲರಲ್ಲಿ ಸಹಾನುಭೂತಿ ವ್ಯಕ್ತಪಡಿಸಿ, ತಾಳ್ಮೆಯಿಂದ ಸಹಿಸಿಕೊಳ್ಳುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು. ನಾವು ಜ್ಞಾನದಲ್ಲಿ ಅಭಿವೃದ್ಧಿಯಾದಂತೆ ಈ ತಾಳ್ಮೆ ಗುಣವು ವೃದ್ಧಿಯಾಗುವದು. ನಾವು ಎಷ್ಟರಮಟ್ಟಿಗೆ ಪರಲೋಕದ ತಂದೆಯಲ್ಲಿರುವ ಈ ತಾಳ್ಮೆ ಗುಣವನ್ನು ಮೆಚ್ಚುತ್ತೇವೆಯೋ ಅಷ್ಟರಮಟ್ಟಿಗೆ ಈ ತತ್ವವನ್ನು ಇತರರ ಪರವಾಗಿ ಅನ್ವಯಿಸುವೆವು. ಪರಲೋಕದ ತಂದೆಯು ಯಾರನ್ನಾದರೂ ಕೃಪೆಯಿಂದ ಕರೆದಿರುವಲ್ಲಿ ಅವನು ಬಹು ಎಚ್ಚರಿಕೆಯಿಂದಿದ್ದು, ಕರ್ತನ ಜೊತೆಯಲ್ಲಿ ಕರೆಗೆ ತಕ್ಕಂತೆ ಸಹಕರಿಸಿ ಕರ್ತನು ನಡೆದಂತ ಇಕ್ಕಟ್ಟಾದ ಮಾರ್ಗದಲ್ಲಿ ನಡೆಯುತ್ತಿರುವವರೆಲ್ಲರಿಗೆ ಸಹಾಯಕವಾಗಿದ್ದು, ಸಹಕರಿಸಬೇಕು-Z ’03, 24 (R3135). R3136

