12 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾವನು? ಮರೆಯಾದವುಗಳಿಂದ ನನ್ನನ್ನು ನಿರ್ಮಲ ಮಾಡು ........... ಅಂಥ ಪಾಪಗಳು ನನ್ನನ್ನು ಆಳದಿರಲಿ. ಯೆಹೋವನೇ ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳು ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ. ಕೀರ್ತನೆಗಳು 19:12-14
ಈ ದೈವ ಪ್ರೇರಿತ ಪ್ರಾರ್ಥನೆಯನ್ನು ಪ್ರತಿಯೊಬ್ಬ ಬುದ್ಧಿವಂತ ಕ್ರೈಸ್ತನು ಎಡಬಿಡದೆ ಮಾಡುತ್ತಿರುವನು. ಇದರಿಂದ ಮರೆಯಾದ ತಪ್ಪುಗಳಿಂದ ಶುದ್ಧಿಯಾಗುವನು. ಹಾಗೆಯೇ, ಅಹಂಕಾರ ಪಾಪಗಳನ್ನು ತಡೆಹಿಡಿದು, ಹೃದಯಪೂರ್ವಕವಾಗಿ ಪ್ರಾರ್ಥಿಸಲು ಅನುಕೂಲವಾಗುವದು. ಹಾಗೆಯೇ, ಎಚ್ಚರಿಕೆಯಿಂದಿದ್ದು, ಪ್ರಾರಂಭದಲ್ಲೇ ಈ ಪಾಪಗಳು ತಲೆ ಎತ್ತದಂತೆ ಮಾಡಲು ತನ್ನ ಹೃದಯವನ್ನು ಶುದ್ಧೀಕರಿಸಿಕೊಳ್ಳುವದಕ್ಕೂ ಹಾಗೂ ಶುದ್ಧರಾಗುವದಕ್ಕಾಗಿ ಕೃಪೆಗೆ ಮೂಲ ಕಾರಣನಾದ ದೇವರನ್ನು ಎಡಬಿಡದೆ ಮರೆಹೋಗಿ ತಕ್ಕ ಸಮಯಗಳಲ್ಲಿ ಸಹಾಯ ಪಡೆಯುವನು. ಯಾರು ಶುದ್ಧ ಜೀವನವನ್ನು ಮತ್ತು ಕರ್ತನ ಸಂಸರ್ಗವನ್ನು ಅಪೇಕ್ಷಿಸಿ ಕೇವಲ ತೋರಿಕೆಯ ಅಥವ ಅನುಮಾನಿಕ ಪಾಪವನ್ನ ಮಾತ್ರ ಕಾದುಕೊಂಡು ತನ್ನ ಮನಸ್ಸಿನಲ್ಲೇ ಪ್ರಾರಂಭವಾಗುವ ಗುಪ್ತ ಪಾಪವನ್ನು ಲೆಕ್ಕಿಸದೆ ನಡೆಯುವವನು ಒಳ್ಳೆಯದನ್ನು ಮೂರ್ಖನಂತೆ ಮತ್ತು ಅವಿವೇಕತನದಿಂದ ಬಯಸುವವನಾಗಿರುವನು-Z ’98, 22 (R2248). R2249

