20 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಆದಕಾರಣ, ನೀವು ಯಾವದನ್ನು ತಿಳಿಯದೆ ಪೂಜಿಸುತ್ತಿರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ. ಅಪೊಸ್ತಲರ ಕೃತ್ಯಗಳು 17:23
ಇಲ್ಲಿ ಅಪೋಸ್ತಲನು ಅನುಸರಿಸಿದ ಕ್ರಮ ನಾವು ಅನುಸರಿಸಲಿಕ್ಕೆ ಯೋಗ್ಯವಾಗಿದೆ. ಎಲ್ಲಾ ಬುದ್ಧಿ ಜೀವಿಗಳು ಹೊಸತನವನ್ನು ನಂಬುವುದಿಲ್ಲ. ಯಾವುದು ಮೌಲ್ಯವೆನಿಸುತ್ತದೋ ಅದು ಬಹಳ ಕಾಲದಿಂದ ಬಂದಿದೆ ಎಂದು ಹೇಳುತ್ತಾರೆ. ಅಪೋಸ್ತಲನಂತೆ ನಾವು ಸತ್ಯ ಸುವಾರ್ತೆಯನ್ನು ತೋರಿಸಲು ಪ್ರಯತ್ನಿಸುವುದಕ್ಕೆ ಅದು ಹೊಸ ಪಾರಮಾರ್ಥಿಕ ವಾರ್ತೆಯಲ್ಲ. ಅದು ಹಳೆಯ ಸುವಾರ್ತೆ, ಅಬ್ರಹಾಮನಿಗೆ ಮುಂತಿಳಿಸಿದ ಸುವಾರ್ತೆ, ನಮ್ಮ ಕರ್ತನಾದ ಕ್ರಿಸ್ತನು ಮತ್ತು ಅಪೋಸ್ತಲರು ಪ್ರಕಟಿಸಿದ ಸುವಾರ್ತೆ. ನಾವು ಎಷ್ಟರಮಟ್ಟಿಗೆ ಈ ಕಾಲದಲ್ಲಿ ತಪ್ಪು ಬೋಧನೆಗಳಿವೆ ಎಂಬದನ್ನು ತೋರಿಸಿಕೊಡುತ್ತೇವೆಯೋ (ಈ ಬೋಧನೆಗಳು ಕತ್ತಲೆ ಯುಗದಲ್ಲಿ ಪ್ರಾರಂಭವಾಯಿತು.) ಅಷ್ಟೇ ತಪ್ಪು ಬೋಧನೆಗಳನ್ನು ಈ ಹೊಸ ಸರಣಿಯಲ್ಲಿ ತಿಳಿಸುತ್ತಿಲ್ಲ. ಬದಲು ನಾವು ಕತ್ತಲೆ ಯುಗಗಳಿಂದ ಬಂದಂತ ತಪ್ಪು ಬೋಧನೆಗಳನ್ನು ತೆಗೆದುಹಾಕಿ, ಬದಿಗಿಟ್ಟು ನಮ್ಮ ಕರ್ತನು ಮತ್ತು ಅಪೋಸ್ತಲರು ಪ್ರಪ್ರಥಮವಾಗಿ ಬೋಧಿಸಿದಂತ ತತ್ವಗಳು, ಸಿದ್ಧಾಂತಗಳು ಹಾಗೂ ನಿಯಮಾವಳಿಗಳನ್ನು ಬೋಧಿಸುತ್ತೇವೆ-Z ’03, 29 (R3138). R3139

