23 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಹೀಗಿರುವದರಿಂದ ನಂಬಿಕೆ ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತವೆ. ಇವುಗಳಲ್ಲಿ ದೊಡ್ಡದು ಪ್ರೀತಿಯೇ. ೧ ಕೊರಿಂಥದವರಿಗೆ 13:13
ಪ್ರೀತಿ ಎಂಬದು ಒಂದು ಉತ್ಕøಷ್ಟವಾದ ವಿಷಯ ಮತ್ತು ಪ್ರೀತಿ ಸದಾ ಕಾಲ ಇರುವದು. ನಾವು ಎಲ್ಲವನ್ನು ನೋಡಿ ಸಂಪೂರ್ಣವಾಗಿ ತಿಳಿದುಕೊಂಡ ಮೇಲೆ ನಂಬಿಕೆ ನಿಲ್ಲುವದಿಲ್ಲ. ತಂದೆ ದೇವರು ಮಾಡಿರುವಂತ ಎಲ್ಲಾ ವಾಗ್ದಾನಗಳು, ವಿಷಯಗಳನ್ನು ನಾವು ಸಾಕ್ಷಾತ್ತಾಗಿ ಪಡೆದಿರುವಾಗ ನಿರೀಕ್ಷೆ ನಿಲ್ಲುವುದಿಲ್ಲ. ಪ್ರೀತಿಯು ಬಿದ್ದು ಹೋಗುವದಿಲ್ಲ. ಕೊನೆಗೊಳ್ಳುವದೇ ಇಲ್ಲ. ಯಾಕಂದರೆ, ಪ್ರೀತಿಗೆ ಪ್ರಾರಂಭವಿಲ್ಲ. ಯಾಕಂದರೆ, ಅದು ಯೆಹೋವ ದೇವರ ಗುಣ, ಆತನ ಸ್ವಭಾವ. ಹೇಗೆ ದೇವರು ಸದಾ ಇರುತ್ತಾನೆಯೋ, ಹಾಗೆಯೇ ಪ್ರೀತಿಯು ನಿರಂತರವಾಗಿರುತ್ತದೆ-Z ’03, 58 (R3156). R3151

