24 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಯಬೇಕು. ಯೋಹಾನನು 17:11
ಕರ್ತನು ಸಭೆಯ ಪರವಾಗಿ ವ್ಯಕ್ತಪಡಿಸಿರುವ ಈ ಸುಂದರ ಭಾವನೆಯನ್ನು ಪರಿಗಣಿಸುವದಾದರೆ, ದೈವ ಕುಟುಂಬವು ಆಶೀರ್ವಾದಪೂರಕವಾದ ಒಂದಾಗಿರುವದರ ಮಹತ್ವದ ಅರಿವು ಎಂದು ನಮ್ಮ ಬುದ್ಧಿಗೆ ಗೊತ್ತಾಗುವದು. ಈ ಒಂದಾಗಿರುವದು, ಒಂದು ಉದ್ದೇಶದಲ್ಲಿ, ವಿಶ್ವಾಸದಲ್ಲಿ, ಸಹಾನುಭೂತಿಯಲ್ಲಿ, ಪ್ರೀತಿಯಲ್ಲಿ, ಮಾನಮರ್ಯಾದೆಯಲ್ಲಿ ಹಾಗೂ ಎಲ್ಲವನ್ನು ಒಂದಾಗಿ ಪಡೆದಿರುವದು ಆಗಿದೆ. ನಮ್ಮ ಕರ್ತನು ದೇವರಲ್ಲಿ ಮೊದಲೇ ಒಂದಾಗಿರುವದನ್ನು ವಿವರಿಸಿದ್ದಾನೆ. ಆದರೆ, ಕ್ರಿಸ್ತನ ಶಿಷ್ಯರು ಇನ್ನು ಈ ಸ್ಥಿತಿ ತಲುಪಿಲ್ಲ. ಈ ಒಂದಾಗುವದನ್ನು ತಲುಪುವ ಗುರಿಯನ್ನಿಟ್ಟು ಅದನ್ನು ಪಡೆಯಲು ನಾವು ಆಶಿಸುವರಾಗಿರಬೇಕೆಂದು ನಮಗೆ ಕರ್ತನು ಬೋಧಿಸಿದ್ದಾನೆ-Z ’03, 77 R3160

