4 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ, ಬೋಧಿಸುವದರಲ್ಲಿ ಪ್ರವೀಣನೂ, ಕೇಡನ್ನು ಸಹಿಸಿಕೊಳ್ಳುವವನು, ಎದುರಿಸುವವರನ್ನು ನಿಧಾನದಿಂದ ತಿದ್ದುವನೂ ಆಗಿರಬೇಕು. ೨ ತಿಮೊಥೆಯನಿಗೆ 2:24, 25
ದೇವ ಜನರಲ್ಲಿ ಕೆಲವರು ಸತ್ಯದ ಮೇಲಿರುವ ತಮ್ಮ ಪ್ರಭಾವವನ್ನ ದೈವ ಯೋಜನೆಯ ವಿಷಯವಾಗಿ ಇತರರೊಂದಿಗೆ ಮಾತಾಡುವಾಗ ಎಲ್ಲೆ ಮೀರಿ ಆತ್ಮವಿಶ್ವಾಸ ಹಾಗೂ ಆತ್ಮ ಭರವಸೆಯನ್ನಿಟ್ಟುಕೊಂಡು ಪ್ರಕಟಿಸುವದರ ಮೂಲಕ ಸತ್ಯದ ಪ್ರಭಾವವದ ಮೇಲೆ ದುಷ್ಪರಿಣಾಮವಾಗುವಂತೆ ಮಾಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಬುದ್ಧಿ ಜೀವಿಗಳೊಡನೆ ಮಾತಾಡುವಾಗ ಈ ಪರಿಣಾಮವುಂಟಾಗಿದೆ. ಆದುದರಿಂದ, ಧೀನ ಸ್ವಭಾವವು ಅದು ಎಲ್ಲೇ ಇದ್ದರು ಅದು ಒಂದು ಅಪರೂಪದ ರತ್ನ. ಈ ಗುಣ ವಿಶೇಷವಾಗಿ ಸತ್ಯಪ್ರಚಾರ ಮಾಡುವಾಗ ಒಂದು ಉಪಯುಕ್ತ ಸಾಧನ ಮತ್ತು ಸತ್ಯದ ಪ್ರಭಾವ ಹೊಳೆಯುತ್ತದೆ. ಹೀಗಿರುವಲ್ಲಿ ಸತ್ಯವನ್ನು ಎಲ್ಲಾ ರೀತಿಯ ಶಕ್ತಿಯಿಂದ ಬಲವಾಗಿ ಪ್ರಯೋಗಿಸೋಣ. ಆದರೆ, ಈ ಪ್ರಯೋಗ ಧೀನತೆಯಿಂದಲೂ, ತಗ್ಗಿದ ಸ್ವಭಾವದಿಂದಲೂ ಪ್ರಯೋಗವಾಗಲಿ. ಅದರಲ್ಲೂ ಸತ್ಯವನ್ನು ಪ್ರಚಾರ ಮಾಡುವಾಗ ಪ್ರಶ್ನೆಯ ರೀತಿಯಲ್ಲಿ ಪ್ರಚಾರ ಮಾಡುವದು ಅನೇಕ ವೇಳೆ ಅದು ಬಲಯುತವಾಗಿಯೂ ಮತ್ತು ಪ್ರಯೋಜನಕರವಾಗಿಯೂ ಕಂಡುಬಂದಿದೆ-Z ’00, 14 (R2558). R2559

