10 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಕ್ರಿಸ್ತನಿಂದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯ ದಯಾರಸಗಳು ಉಂಟಾಗುವದಾದರೆ ಐಕಮತ್ಯವುಳ್ಳವರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋನ್ಯ ಭಾವವುಳ್ಳವರೂ ಒಂದೇ ಗುರಿಯಿಟ್ಟುಕೊಂಡವರೂ ಆಗಿರ್ರಿ. ಫಿಲಿಪ್ಪಿಯವರಿಗೆ 2:1, 2
ಐಕ್ಯತೆ, ಸಮಾಧಾನ ಮತ್ತು ಸಹೋದರ ಕರುಣೆಯ ಬಗ್ಗೆ ಎಂತಹ ಪ್ರಭೋದನೆ! ಸಭೆಯಲ್ಲಿರುವ ಪ್ರತಿಯೊಬ್ಬನು ಸಮಾಧಾನವಾಗಿಯೂ, ಸಹಿಸಿಕೊಳ್ಳುವವನಾಗಿಯೂ, ದಯಾಪರನಾಗಿಯೂ, ಸಹಾಯ ಮಾಡುವವನಾಗಿಯೂ ಮತ್ತು ಒಬ್ಬರನೊಬ್ಬರು ಸಂತೈಸುವವರಾಗಿಯೂ ಇರುವಂತೆ ಈ ಪ್ರಬೋಧನೆ ನಮಗೆ ಸೂಚನೆಯನ್ನು ಕೊಟ್ಟಿದೆ. ಹೀಗೆ ಕರ್ತನ ಆತ್ಮವು ಎಲ್ಲರಲ್ಲಿಯೂ ಸಮೃದ್ಧವಾಗಿದ್ದು, ನೀತಿ ಮಾರ್ಗದಲ್ಲಿ ನಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ಪ್ರಿಯ ಸಹೋದರರೆ (ಬಾರ್ನಬಾಸ್ ಅಂದರೆ, ಸಹೋದರರನ್ನ ನೆಮ್ಮದಿಯಾಗಿಡುವುದು) ಹಿತಕರವಾಗಿಯೂ, ಸಮಾಧಾನದಿಂದ ಕೂಡಿದವರಾಗಿಯೂ ಇರುವದು ಎಂತಹ ಯೋಗ್ಯವಾದ ಸ್ಥಿತಿ. ಆದುದರಿಂದ ನಾವು ಪವಿತ್ರಾತ್ಮನನನ್ನು ಸಮೃದ್ಧಿಯಾಗಿ ಪಡೆದು ಕರ್ತನ ಚಿತ್ತವನ್ನು ಆತನ ಇಷ್ಟವನ್ನು ನೆರವೇರಿಸುವ ನಾವು ದೇವರಿಗೆ ಪುತ್ರ ಪುತ್ರಿಯರಾಗಿ ಚಿಯೋನನ್ನು ಸಂತೈಸುವವರಾಗಿ ತಂದೆ ದೇವರ ಪ್ರತಿನಿಧಿಗಳಾಗಿ ಪವಿತ್ರಾತ್ಮ ಮತ್ತು ಸತ್ಯವನ್ನು ವಿತರಣೆ ಮಾಡುವ ಸಾಧನಗಳಾಗೋಣ-Z ’04, 296 (R3434). R3436

