16 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿ ಮಾಡಿರಿ. ೧ ಥೆಸಲೊನೀಕದವರಿಗೆ 5:18
ಕರ್ತನ ಅನ್ಯೋನ್ಯತೆಯಲ್ಲಿದ್ದು, ಆತನ ಚಿತ್ತವನ್ನು ಭಕ್ತಿ ಭಾವದಿಂದ ನೆರವೇರಿಸುವ ಹೃದಯವುಳ್ಳವರು ಪ್ರತಿದಿನ ಮುಂಜಾನೆಯಲ್ಲಿ ದೇವರ ಆಶೀರ್ವಾದವನ್ನು ಯಾಚಿಸುವದಲ್ಲದೆ, ಪ್ರತಿದಿನ ಸಂಜೆಯಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಮರ್ಪಿಸುವನು. ಪ್ರತಿಯೊಬ್ಬನು ತನ್ನ ಇಡೀ ಜೀವಮಾನದ ವಹಿವಾಟಿನಲ್ಲಿ ತಾನು ಕರ್ತನಿಗಾಗಿ ಎಲ್ಲವನ್ನು ಪ್ರತಿಷ್ಠೆಪಡಿಸಿಕೊಂಡಿದ್ದೇನೆ ಎಂಬದನ್ನು ಜ್ಞಾಪಿಸಿಕೊಂಡು ನಂಬಿಕೆಯಿಂದ ತನ್ನ ಎಲ್ಲಾ ಜೀವನದ ಎಲ್ಲಾ ವಿಷಯಗಳ ಬಗ್ಗೆ ಕರ್ತನನ್ನು ಆಶ್ರಯಿಸಿಕೊಂಡು, ಅವರು ಜೀವನದಲ್ಲಿ ನಿರ್ವಹಿಸುವ ಕಾರ್ಯಕ್ಕನುಗುಣವಾಗಿ ದೇವರ ಅನುಗ್ರಹ ಮತ್ತು ಆತನ ಪರಾಮರಿಕೆಯನ್ನು ಮನಗಂಡು ಅದರಂತೆಯೇ ದೇವರಿಗೆ ಕೃತಜ್ಞತಾಸ್ತುತಿ ಅರ್ಪಿಸಬೇಕು. ನಮ್ಮ ವಿಷಯದಲ್ಲಿ ಇದೇ ದೇವರ ಚಿತ್ತವಾಗಿದೆ. ದೇವರ ಚಿತ್ತ ನಮ್ಮದಾಗಿಸಿಕೊಂಡು ದೇವರ ಆಶೀರ್ವಾದವನ್ನು ಪಡೆದು ಸದಾ ಆತನನ್ನು ನಿರೀಕ್ಷಿಸುತ್ತಾ, ಜೀವನ ಸಾಗಿಸುವದು ಸೂಕ್ತ. ಇಂತಹ ಸ್ಥಿತಿಯು ನಾವು ಇಕ್ಕಟ್ಟಾದ ಮಾರ್ಗದಲ್ಲಿ ನಡೆದು ಅಭಿವೃದ್ಧಿ ಹೊಂದಲು ಸಹಾಯಕವಾಗಿರುವುದು. ಇವು ನಮಗೆ ಸಹಕಾರಿಯಾಗಿದ್ದು, ನಮ್ಮ ಕರೆಯುವಿಕೆ ಮತ್ತು ಆರಿಸುವಿಕೆಯು ಕೈಗೂಡುವದು-Z ’03, 25 (R3135). R3136

