5 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಇದಲ್ಲದೆ, ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರಿತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ. ರೋಮಾಪುರದವರಿಗೆ 8:28
ಇದನ್ನು ಮನಸ್ಸಿನಲ್ಲಿಟ್ಟುಕೊಂಡು ದೇವ ಜನರೆಲ್ಲರೂ ದೈವಾನುಗ್ರಹದಂತೆ ತಮಗಿರುವುಗಳಲ್ಲಿ ತೃಪ್ತರಾಗಿದ್ದು, ಆಲಸ್ಯರಾಗಿರದೆ, ತಮ್ಮ ಶಕ್ತ್ಯಾನುಸಾರ ತಾವು ಮಾಡಬೇಕಾಗಿರುವದನೆಲ್ಲಾ ಮಾಡಿ, ತೃಪ್ತರಾಗಿರಬೇಕು. ಅವರು - ಆತಂಕಗೊಳ್ಳದೆ, ಸಿಡುಕಾಗಿರದೆ, ಅತೃಪ್ತಿಯುಳ್ಳವರಾಗಿ ದೇವರ ಪರಾಮರಿಕೆಯನ್ನು ಕುರಿತು ಪ್ರಶ್ನಿಸುವವರಾಗಿರಬಾರದು. ಕರ್ತನು ನಮ್ಮನ್ನು ವ್ಯಕ್ತಿಗತವಾಗಿ ಯಾವುದೋ ಒಂದು ವಿಶೇಷ ಸೇವೆಯಲ್ಲಿ ನಮ್ಮನ್ನು ತೊಡಗಿಸಲು ಈ ಅನುಭವಗಳನ್ನು ನಮ್ಮ ಜೀವನದಲ್ಲಿ ನಡೆಯುವದಕ್ಕೆ ಅವಕಾಶಕೊಟ್ಟು ನಮ್ಮನ್ನು ಒಂದು ವಿಶೇಷ ಸೇವೆಗಾಗಿ ತಯಾರು ಮಾಡುತ್ತಿರಬಹುದು. ನಾವು ತಿಳಿಯತಕ್ಕದ್ದೇನಂದರೆ, ನಮ್ಮಲ್ಲಿ ಯಾವ ಅಪರಿಪೂರ್ಣತೆಯನ್ನು ಕುರಿತು ತೀರ್ಮಾನಿಸಲು ಸಮರ್ಥರಲ್ಲ. ಹೀಗಿರುವಲ್ಲಿ ನಮಗೆ ಬಂದೊದಗುವ ಅನುಭವಗಳನ್ನು, ಘಟನೆಗಳನ್ನು ತೀರ್ಮಾನಿಸಲು ಸಾಧ್ಯವಿಲ್ಲ. ಇವೆಲ್ಲವು ನಮಗೆ ಸಹಾಯಕವಾಗಿ ಪರಿಣಮಿಸುವದು-Z ’00, 22 (ಖ 2562). R2562

