18 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಎಲ್ಲವನ್ನೂ ಪರಿಶೀಲಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ. ೧ ಥೆಸಲೊನೀಕದವರಿಗೆ 5:21
ಭವಿಷ್ಯ ನುಡಿಯುವದನ್ನಾಗಲಿ ಅಥವ ಸಾರ್ವಜನಿಕವಾಗಿ ಮಾತಾಡುವದನ್ನಾಗಲಿ ಅವುಗಳನ್ನು ಎಷ್ಟೇ ಪರಿಗಣಿಸಿದರೂ ಅಥವ ಆಸಕ್ತಿ ತೋರಿಸಿದರೂ ಕರ್ತನ ಜನರು ಅವುಗಳನ್ನು ಕೇಳುವಾಗ, ಕೇಳಿದ್ದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವಿಮರ್ಷೆ ಮಾಡಿ ಅಂಗೀಕರಿಸಬೇಕು. ತಾವು ಕೇಳಿದ ಎಲ್ಲವನ್ನು ರುಜುವಾತುಪಡಿಸಬೇಕು ಮತ್ತು ತಮ್ಮ ಮನಸ್ಸಿನಲ್ಲಿ ವಿವೇಚಿಸಿ, ತಾವು ಕೇಳಿದ ಸಂಗತಿಗಳು ತರ್ಕಬದ್ಧವಾಗಿಯೂ, ದೈವೋಕ್ತಿಗಳಿಗನುಸಾರವಾಗಿಯೂ ಇದೆಯೇ ಅಥವಾ ಅವು ಕೇವಲ ಊಹೆಯಿಂದಲೂ ಮತ್ತು ಕುತರ್ಕದಿಂದಲು ಕೂಡಿವೆಯೋ ಎಂಬದನ್ನು ತಿಳಿಯುವುದು ಮುಖ್ಯವಾದ ವಿಷಯವಾಗಿದೆ. ದೈವ ವಾಕ್ಯದ ಪರೀಕ್ಷೆಗೆ ತಾವು ಕೇಳಿದ ಎಲ್ಲಾ ವಿಷಯವನ್ನು ಒಪ್ಪಿಸಿ, ಅವು ಪವಿತ್ರಾತ್ಮನಿಗೆ ಅನುಗುಣವಾಗಿವೆಯೋ ಎಂಬದನ್ನು ಅರಿತು ಈ ಪರೀಕ್ಷೆಯಲ್ಲಿ ಸಮರ್ಥನೆಯಾಗದ ಯಾವದೇ ವಿಷಯಗಳಾಗಲಿ ಅವುಗಳನ್ನು ನಾವು ನಿರಾಕರಿಸಬೇಕು-Z ’03, 26 (R3135). R3137

