19 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ಸಕಲ ವಿಧವಾದ ಕೆಟ್ಟತನಕ್ಕೆ ದೂರವಾಗಿರಿ. ೧ ಥೆಸಲೊನೀಕದವರಿಗೆ 5:22
ಈ ಪ್ರಬೋಧನೆಗಳು ಎಲ್ಲ ತರವಾದ ಕೆಟ್ಟವುಗಳ ವಿರುದ್ಧವಾಗಿದೆ. ಕೆಟ್ಟತನ ಒಳ್ಳೆಯದಂತೆ ಕಾಣುವ ಅಥವ ಕೆಟ್ಟದಾಗಿಯೇ ಇರಬಹುದು, ಯಾವುದಾದರೂ ಇವೆಲ್ಲವನ್ನು ನಿರಾಕರಿಸಬೇಕು. ನಮ್ಮ ದೃಷ್ಟಿಗೆ ಒಳ್ಳೆಯದಾಗಿಯೇ ಕಾಣಬಹುದು. ಆದರು ಅದು ಒಳ್ಳೆಯದಲ್ಲ. ಹೀಗಿರುವಲ್ಲಿ ಅಪೋಸ್ತಲನ ಎಚ್ಚರಿಕೆಯ ಮಾತು ಒಂದು ಗಂಭೀರವಾದ ತತ್ವವಾಗಿದೆ. ಹೀಗಿರುವಲ್ಲಿ ಕೆಟ್ಟದನ್ನು ನಿರಾಕರಿಸುವದಲ್ಲದೆ, ನಮ್ಮ ದೃಷ್ಟಿಯಲ್ಲಿ ಒಳ್ಳೇದಾಗಿ ಕಾಣುವಂತ ವಿಷಯಗಳನ್ನು ದೂರವಾಗಿರಿಸಬೇಕು. ಯಾಕಂದರೆ, ನಮ್ಮ ನೆರೆಹೊರೆಯವರು ಮತ್ತು ಸ್ನೇಹಿತರು ಅವುಗಳನ್ನು ಕೆಟ್ಟದೆಂದು ಪರಿಗಣಿಸಿ ನಮ್ಮನ್ನು ಅಪಾರ್ಥ ಮಾಡಿಕೊಳ್ಳಬಹುದು. ನಮ್ಮ ಸ್ವಸ್ತ ಮನಸ್ಸು ನೋಡಲಿಕ್ಕೆ ಕೆಟ್ಟದಾಗಿ ಕಾಣದೆ ಇರುವ, ಕೆಟ್ಟದಾಗಿ ಕಾಣುವ ಹಾಗೂ ತೋರಿಕೆಗೆ ಒಳ್ಳೆಯದಾಗಿ ಕಾಣುವ ಎಲ್ಲಾ ಕೆಟ್ಟದನ್ನು, ಕೆಟ್ಟತನವನ್ನು ವಿಸರ್ಜಿಸಲು ಆದೇಶಿಸುತ್ತೆ. ಆಗ ನಾವು ಕರ್ತನನ್ನು ಮತ್ತು ಸತ್ಯವನ್ನು ಹೆಚ್ಚಾಗಿ ಅನುಸರಿಸಲು ಸಾಧ್ಯವಾಗುತ್ತೆ-Z ’03, 26 (R3135). R3137

