13 ಆಗಸ್ಟ್ರ ದೈನಂದಿನ ಭಕ್ತಿಚಿಂತನೆ
ನಾವು ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ೨ ಕೊರಿಂಥದವರಿಗೆ 5:20
ಕ್ರೈಸ್ತರಾಗಿ ಈ ಸಂಗತಿಯನ್ನು ನಾವು ಯಾವಾಗಲು ಪ್ರಾಮುಖ್ಯವಾಗಿ ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವದಾದರೆ, ಎಂತಹ ಮಹತ್ವವನ್ನು ನಮ್ಮ ಗುಣಕ್ಕೆ ಕೂಡಿಸುವುದು, ಎಂತಹ ಪರಿವರ್ತನ ಶಕ್ತಿ ಇದಾಗುತ್ತದೆ! ನಮ್ಮ ನೂತನ ಸೃಷ್ಟಿ ಹೋರಾಡುವಾಗ ನಮ್ಮಲ್ಲಿರುವ ಹಳೆಯ ಶಾರೀರಿಕ ಸ್ವಭಾವವು ಸತ್ತುಹೋಗಿದೆ ಎಂದು ಪರಿಗಣಿಸಿ ಅದರ ಮೇಲೆ ಜಯಸಾಧಿಸಲು ಸಹಾಯಕವಾಗಿರುತ್ತದೆ. ನಮ್ಮ ಪೌರತ್ವವು ಪರಲೋಕದಲ್ಲಿದೆ ಎಂಬದಾಗಿ ಅಪೋಸ್ತಲನು ಹೇಳುತ್ತಾನೆ. ನಾವು ಈಗ ಇಲ್ಲಿ ಜೀವಿಸುತ್ತಿದ್ದರೂ ನಾವು ಈ ಲೋಕದವರಲ್ಲ. ನಾವು ನಮ್ಮ ನಿಷ್ಠೆಯನ್ನು ಪೌರತ್ವವನ್ನು ದೇವ ರಾಜ್ಯಕ್ಕೆ ವರ್ಗಾಯಿಸಿಕೊಂಡಿದ್ದೇವೆ. ಈಗ ನಾವು ದೇವರ ರಾಜ್ಯದ ಭಾವಿ ಪ್ರಜೆಗಳಾಗಿ ಅನ್ಯರು ಪರಕೀಯರಂತಿರುವ ಈ ಲೋಕದ ಜನರ ಮಧ್ಯದಲ್ಲಿ ನಾವು ಜೀವಿಸುತ್ತಿದ್ದರೂ ನಾವು ರಾಯಭಾರಿಗಳಾಗಿ, ಪ್ರತಿನಿಧಿಗಳಾಗಿರುವಲ್ಲಿ ಹೆಮ್ಮೆ ಮತ್ತು ಗೌರವವುಳ್ಳ ಸ್ಥಾನದಲ್ಲಿದ್ದು, ಹೆಚ್ಚಿನ ಜವಾಬ್ದಾರಿಯುತವಾದ ಕಾರ್ಯವನ್ನು ನಿರ್ವಹಿಸಿದಾಗ ಅಪೋಸ್ತಲನು ಹೇಳಿರುವ ನೀವು ಮಾತಿನಲ್ಲಾಗಲಿ, ಕೃತ್ಯದಲ್ಲಾಗಲಿ ಯಾವುದನ್ನು ಮಾಡಿದರೂ, ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಮಾಡಿರಿ ಎಂಬದನ್ನು ನೆನಪಿನಲ್ಲಿಟ್ಟು ಜೀವಿಸತಕ್ಕದ್ದು-Z ’04, 72 (R3329). R3330

