2 ಜನವರಿರ ದೈನಂದಿನ ಭಕ್ತಿಚಿಂತನೆ
ನೀವು ನಿಮ್ಮ ಸ್ವಂತ ಸೊತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರೂ ಆದ ಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ ೧ ಕೊರಿಂಥದವರಿಗೆ 6:19, 20
ವರ್ಷದ ಪ್ರಾರಂಭದಲ್ಲಿ ಇದಕ್ಕಿಂತ ಮುಖ್ಯವಾದ ಉಪದೇಶ ನಮಗೆ ಬೇರೆ ಯಾವ ಪ್ರಸಂಗದಲ್ಲಿಯೂ ಸಿಗುವಂತಿಲ್ಲ. ಇದರ ತಾತ್ಪರ್ಯವೇನಂದರೆ, ನಾವು ನಮ್ಮವರಲ್ಲ, ಇನ್ನೊಬ್ಬಾತನಿಗೆ ಸೇರಿದ್ದೇವೆ. ಈ ಕಾರಣದಿಂದ ನಮ್ಮನ್ನು ನಾವೇ ಮೆಚ್ಚಿಸಬೇಕಿಲ್ಲ. ಆದರೆ, ಆತನಿಗೆ ನಾವು ಮೆಚ್ಚಿಗೆಯಾಗಬೇಕು. ಹಾಗೆಯೇ ನಮಗೆ ನಾವೇ ಸೇವೆ ಮಾಡುವಂತಿಲ್ಲ. ಆತನೊಬ್ಬನನ್ನೇ ಸೇವಿಸಬೇಕು. ನಮ್ಮ ಮನದಿಚ್ಚೆಯಂತೆ ನಾವು ನಡೆಯುವಂತಿಲ್ಲ. ಆದರೆ, ದೇವರ ಚಿತ್ತವನ್ನು ಅರಿತು ಅದರಂತೆ ನಡೆಯಬೇಕು. ಹಾಗಾದರೆ, ಇವುಗಳಿಂದ ನಮಗೆ ಆಗುವ ಪ್ರಯೋಜನವೇನು? ಮೊದಲನೆಯದಾಗಿ ಪರಿಪೂರ್ಣವಾದ, ಮಿಗಿಲಾದ ಪವಿತ್ರತೆಯ ಲಾಭ ಉಂಟು. ಎರಡನೆಯದಾಗಿ ಪಾಪದಿಂದ ಬಿಡುಗಡೆ ಸಿಕ್ಕಿ ನೀತಿಗೆ ಬಾಧ್ಯರಾಗುವದು. ಮೂರನೆಯದಾಗಿ ಅಹಂ ಮತ್ತು ಲೌಕಿಕತೆಯಿಂದ ಪ್ರತ್ಯೇಕಿಸಲ್ಪಟ್ಟು ಕ್ರಿಸ್ತಯೇಸುವಿನಲ್ಲಿ ದೈವಚಿತ್ತಕ್ಕೆ ನಮ್ಮನ್ನೇ ಒಳಪಡಿಸಿಕೊಳ್ಳುವದು-Z ’97, 35 (R2097). R2099

