25 ಜನವರಿರ ದೈನಂದಿನ ಭಕ್ತಿಚಿಂತನೆ
ಆದದರಿಂದ, ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು, ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು. ಮತ್ತಾಯನು 6:34
ದೇವರ ಸೇವೆಯಲ್ಲಿ ತೊಡಗಿರುವ ನಮಗೆ ಮನಃಪೂರ್ವಕವಾದ ರೀತಿಯಲ್ಲಿ ಆತನಿಗಾಗಿ ದುಡಿಯಬೇಕು. ನೀತಿಯ ಅಭಿವೃದ್ಧಿಗಾಗಿ ಹಾಗೂ ದೇವರು ವಾಗ್ದಾನ ಮಾಡಿದ ರಾಜ್ಯ ಹೊಂದುವದಕ್ಕಾಗಿಯೂ ಶ್ರಮಿಸಬೇಕು ಎಂಬ ಉದಾತ್ತ ಭಾವನೆಗಳು ನಮ್ಮಲ್ಲಿ ಸದಾಕಾಲ ನೆಲಸಿರುವದಾದರೆ, ಭವಿಷ್ಯತ್ತಿನ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂಬದಾಗಿ ನಮ್ಮ ಕರ್ತನು ಆಶ್ವಾಸನೆ ಕೊಡುತ್ತಾನೆ. ಆತನ ಶಿಷ್ಯರಾದ ನಮಗೆ ದಿನೇ ದಿನೇ ಸಾಕಷ್ಟು ಶೋಧನೆಗಳು ತೊಂದರೆಗಳು ಸಂಭವಿಸಿದರೂ, ನಾವು ಧೃತಿಗೆಡದೆ ಕರ್ತನ ತೋಳಿನ ಆಧಾರದಿಂದ ಇಕ್ಕಟ್ಟಾದ ಮಾರ್ಗದಲ್ಲಿ ಪಯಣಿಸುವದಕ್ಕೆ ಸಾಧ್ಯವಾಗುತ್ತದೆ. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು ಇದೆಲ್ಲಾದರಲ್ಲಿ ದೇವರಿಗೆ ಕೃತಜ್ಞತಾ ಸ್ತೋತ್ರ. ಯಾಕಂದರೆ, ಅನುದಿನವೂ ಆತನ ಕೃಪೆಯೇ ನಮಗೆ ಇವೆಲ್ಲವನ್ನು ಸಹಿಸಿಕೊಳ್ಳುವದಕ್ಕೆ ಆಧಾರವಾಗುತ್ತದೆ-Z ’98, 44 (R2259). R2260

