23 ಜನವರಿರ ದೈನಂದಿನ ಭಕ್ತಿಚಿಂತನೆ
ಸಹೋದರರೇ ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ಇದ್ದುಕೊಂಡಿರಲಿ. ೧ ಕೊರಿಂಥದವರಿಗೆ 7:24
ಕೆಲವು ವೇಳೆಗಳಲ್ಲಿ ನಾವು ನಿರ್ವಹಿಸುವ ಕರ್ತವ್ಯಗಳ ಮಧ್ಯೆ ಘರ್ಷಣೆಗಳಾದ ಹಾಗೆ ಕಾಣಬಹುದು. ಆದರೆ, ನಿಜವಾಗಿ ಹಾಗೆ ಆದಂತೆ ನಡೆಯುವದಿಲ್ಲ. ಕ್ರೆöೈಸ್ತನಾದವನ ಮೊದಲ ಆದ್ಯ ಕರ್ತವ್ಯ, ಅವನು ಮನಃಪೂರ್ವಕವಾಗಿ ತನ್ನ ಎಲ್ಲಾ ಕೆಲಸಕಾರ್ಯಗಳಲ್ಲಿ ಕರ್ತನು ಸೃಷ್ಠಿಕರ್ತನೂ ಆಗಿರುವ ದೇವರನ್ನು ಮೊದಲು ಗೌರವಿಸಬೇಕು. ಎರಡನೆಯದಾಗಿ, ಅವನು ಗಂಡನಾಗಿ, ತಂದೆಯಾಗಿ ಇದ್ದ ಪಕ್ಷದಲ್ಲಿ, ತನ್ನ ಹೆಂಡತಿ ಹಾಗೂ ಮಕ್ಕಳನ್ನು ನೋಡಿಕೊಂಡು ಸಂಸಾರದ ಕರ್ತವ್ಯ ನಿಭಾಯಿಸಬೇಕು. ಹಾಗೆ ಅವಳು ಹೆಂಡತಿಯಾಗಿ ತಾಯಿಯಾಗಿ ಇದ್ದಲ್ಲಿ, ತನ್ನ ಗಂಡ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕು. ಮದುವೆಯ ಒಪ್ಪಂದವೆಂಬದು ದೈವಿಕ ಏರ್ಪಾಟಿನಲ್ಲಿ, ಪ್ರತಿ ಗಂಡನ ಕಾಲ, ಸಮಯ ಹಾಗೆಯೇ ಪ್ರತಿ ಹೆಂಡತಿಯ ಸಮಯಗಳ ಮೊದಲ ಆಧಾರವಾಗುತ್ತದೆ. ಈ ಆಧಾರದ ಬೇಡಿಕೆಗಳನ್ನು ನ್ಯಾಯಪೂರ್ವಕವಾಗಿ ಪೂರೈಸಿದ ನಂತರವೇ ಹೊರಗಿನವರಿಗೆ ಅವರ ಅವಶ್ಯಕತೆಗಳ ಪೂರೈಸುವಿಕೆಗೆ ಗಮನಕೊಡಬಹುದು-Z ’99, 155 R2488

