31 ಜನವರಿರ ದೈನಂದಿನ ಭಕ್ತಿಚಿಂತನೆ
ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡಿಸುವನು ಅವರಿಗೆ ತನ್ನ ಮಾರ್ಗವನ್ನು ತೋರಿಸುವನು. ಕೀರ್ತನೆಗಳು 25:9
ಮೇಲಣಿಂದ ಇಳಿದು ಬರುವ ಜ್ಞಾನ ಪಡೆಯುವವರಲ್ಲಿ ಇಂಥ ದೀನ ಮನೋಭಾವ ಇರಬೇಕಾದದ್ದು ಅಗತ್ಯ. ಇವರು ತಮ್ಮಲ್ಲಿರುವ ಕೊರತೆಗಳು, ತಿಳುವಳಿಕೆಯ ಅಭಾವ ಇವುಗಳ ಬಗ್ಗೆ ದೈನ್ಯತೆಯ ಭಾವದಿಂದ ಒಪ್ಪಿಕೊಂಡರೆ ಮಾತ್ರ ದೇವರಿಂದ ಉಚಿತವಾಗಿ ಬರುವಂಥ ಜ್ಞಾನವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಬಲ್ಲರು. ಯಾಕಂದರೆ, ಈಗಿನ ಕಾಲದಲ್ಲಿ ಯಾರಾರು ಸ್ವೀಕರಿಸುವ ಮನೋಭಾವದಿಂದ ಕೂಡಿರುತ್ತಾರೋ, ಅವರಿಗೆ ಮಾತ್ರ ದೇವರು ಈ ಜ್ಞಾನವನ್ನು ಕೊಡುವದಕ್ಕೆ ಇಷ್ಟವುಳ್ಳವನಾಗಿದ್ದಾನೆ. ದೀನತೆಯಿಂದಲೇ ದೇವರ ಶಿಕ್ಷಣಗಳ ಆತ್ಮವನ್ನು ಹೊಂದಲಿಕ್ಕೆ ಸಾಧ್ಯ. ನ್ಯಾಯಬದ್ಧವಾಗಿ ಕಾರಣಪೂರ್ವಕವಾಗಿ ಪಕ್ಷಪಾತವಿಲ್ಲದೆ, ಸರಿಯಾದ ರೀತಿಯಲ್ಲಿ ಭಾವಿಸುವವರಲ್ಲಿ ಇಂಥ ದೀನ ಮನಸ್ಸು ಪ್ರಪ್ರಥಮವಾಗಿ ಬೇರೂರಿದ್ದರೆ ಮಾತ್ರ ಜ್ಞಾನದ ಭಂಡಾರವನ್ನೇ ಹೊಂದಿಕೊಳ್ಳಬಹುದು. ಆದ್ದರಿಂದ ದೈನ್ಯತೆ ಎಂಬ ಸದ್ಗುಣ ಯೇಸುಕ್ರಿಸ್ತನಲ್ಲಿ ಪ್ರಾಥಮಿಕವಾಗಿ ಮನೋಧರ್ಮವಾಗಿರುತ್ತದೆ-Z ’00, 68 R2585

