24 ಜನವರಿರ ದೈನಂದಿನ ಭಕ್ತಿಚಿಂತನೆ
ಪ್ರೀತಿ ಸತ್ಯತೆಗಳು ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ. ಙ್ಞಾನೋಕ್ತಿಗಳು 3:3
ನ್ಯಾಯಶೀಲತೆಯು ಪ್ರೀತಿಯ ಆಜ್ಞೆಗಳಲ್ಲಿ ಪ್ರಥಮ ವೈಶಿಷ್ಠವೆನಿಸಿದರೂ ಅದೇ ಅದರ ಎಲ್ಲಾ ಅಗತ್ಯಗಳ ಅಂತಿಮವಾಗುವದಿಲ್ಲ. ಕಟ್ಟುನಿಟ್ಟಿನ ನ್ಯಾಯನೀತಿಗಳ ಮೇರೆ ಮೀರಿದರೂ, ನಮ್ಮಲ್ಲಿರುವ ಪ್ರೀತಿ ಭಾವನೆಗಳು, ಕರುಣೆ, ಕ್ಷಮಿಸುವಿಕೆ ಎಂಬ ಸದ್ಗುಣಗಳ ಆಧಾರದಿಂದ ನಡೆದುಕೊಳ್ಳಬೇಕು ಎಂಬುದನ್ನು ನಾವು ರೂಢಿಸಿಕೊಂಡಾಗ ನಮ್ಮ ಪಾಲಿನ ನಿಜವಾದ ಸಜ್ಜನಿಕೆ ದೃಢಪಡಿಸುತ್ತದೆ. ನಾವು ಎಲ್ಲಿಯವರೆಗೆ ಕರುಣೆ, ದಯಾರಸಗಳಲ್ಲಿ ಆಸಕ್ತರಾಗಿರುವೆವೋ ಆಗ ನಾವು ದೇವರ ಪ್ರೀತಿಯನ್ನು ಅನುಸರಿಸುವಲ್ಲಿ ಯಶಸ್ವಿಯಾಗುತ್ತೇವೆ. ನಾವು ಇತರರೊಂದಿಗೆ ವ್ಯವಹರಿಸುವಾಗ ಈ ಒಂದು ಅಂಶವನ್ನು ಮರೆಯಬಾರದು. ಏನಂದರೆ, ಅವರೂ ಸಹ ನಮ್ಮ ಹಾಗೆ ಅಸಂಪೂರ್ಣರೂ, ಕೆಟ್ಟಿಹೋದವರೂ ಆಗಿರುತ್ತಾರೆ. ಆದ್ದರಿಂದ, ಅವರೊಂದಿಗೆ ನ್ಯಾಯವನ್ನು ಅನುಸರಿಸಿ ನಡೆದುಕೊಳ್ಳಬೇಕು. ಹೀಗೆ ಮಾಡುವದಾದರೆ, ಪರಲೋಕದಲ್ಲಿರುವ ನಮ್ಮ ತಂದೆಗೆ ಮಕ್ಕಳಾಗಿರುತ್ತೇವೆ-Z ’02, 171 R3020

